ಮಹಿಳಾ ಮೋರ್ಚಾದಿಂದ ಸೇವಾ ಸಪ್ತಾಹ
ಸಿದ್ದಾಪುರ, ಅ. ೧೦: ವೀರಾಜಪೇಟೆ ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸೇವಾ ಸಪ್ತಾಹ ಕಾರ್ಯಕ್ರಮ ದಿಡ್ಡಳ್ಳಿ ಹಾಡಿ ಹಾಗೂ ಅಮ್ಮತ್ತಿ ಹೊಸೂರು ಗ್ರಾಮದಲ್ಲಿ ನಡೆಯಿತು. ಹೊಸೂರು ಶಕ್ತಿ ಕೇಂದ್ರದ ವ್ಯಾಪ್ತಿಯ ಕಿಶೋರಿಯರಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ಪೌಷ್ಠಿಕಾಂಶದ ಮಾತ್ರೆಗಳನ್ನು ಮಹಿಳಾ ಮೋರ್ಚಾದ ವತಿಯಿಂದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಲ್ದಾರೆ ಹಾಗೂ ಚೆನ್ನಯ್ಯನಕೋಟೆಯ ಮಹಿಳಾ ಮೋರ್ಚಾದ ಪ್ರಮುಖ ಜ್ಯೋತಿ ಕುಶಾಲಪ್ಪ ಹಾಗೂ ತಾಲೂಕು ಮಹಿಳಾ ಮೋರ್ಚಾದ ಅಧ್ಯಕೆÀ್ಷ ಕವಿತಾ ಬೋಜಪ್ಪ, ಪ್ರಧಾನ ಕಾರ್ಯದರ್ಶಿ ಶಿಲ್ಪ ಅಪ್ಪಣ್ಣ ಮತ್ತು ರೇಖಾ ಗಣಪತಿ, ಉಪಾಧ್ಯಕೆÀ್ಷ ಸಜಿತಾ ರವೀಂದ್ರ, ಸಾಮಾಜಿಕ ಜಾಲತಾಣದ ಪ್ರಮುಖರಾದ ಕಾವ್ಯ ಮಧು, ಸಹ ಪ್ರಮುಖರಾದ ರೀಶಾ ಸುನಿಲ್, ಹೊಸೂರು ಗ್ರಾಮದ ಮಹಿಳಾ ಮೋರ್ಚಾದ ಪ್ರಮುಖರಾದ ಪಂದ್ಯAಡ ಶಾಂತಿ ಹಾಗೂ ಸದಸ್ಯರುಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.