ನಾಪೋಕ್ಲು, ಅ. ೧೧ : ನಾಪಂಡ ಪಿ.ತಿಮ್ಮಯ್ಯ ಅವರನ್ನು ಏಷ್ಯಾ ಫೆಸಿಫಿಕ್‌ಗೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಅವರು ಅಕ್ಟೋಬರ್ ೧ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ನಾಪಂಡ ತಿಮ್ಮಯ್ಯ ಮೆರಿಟರ್ ಕಂಪೆನಿಯ ಭಾರತ ಹಾಗೂ ಆಸ್ಟೆçÃಲಿಯಾಗಳ ಉಪಾಧ್ಯಕ್ಷರಾಗಿ ಈ ಹಿಂದೆ ಸೇವೆಸಲ್ಲಿಸಿದ್ದರು. ಅವರ ಕಾರ್ಯವೈಖರಿ ಹಾಗೂ ಕೌಶಲ್ಯತೆಯನ್ನು ಪರಿಗಣಿಸಿ ಇದೀಗ ಏಷ್ಯಾ ಫೆಸಿಫಿಕ್‌ಗೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ತಿಮ್ಮಯ್ಯ ಅವರು ಮೈಸೂರಿನ ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ನಾಪಂಡ ಬಿ.ಪೂವಯ್ಯ ಮತ್ತು ಎನ್.ಪಿ.ದೇವಕ್ಕಿ ಅವರ ಪುತ್ರ. -ದುಗ್ಗಳ