ಮಡಿಕೇರಿ, ಅ. ೧೦: ಬೆಂಗಳೂರಿನ ಶ್ರೀ ಶುಭಗುರು ಟ್ರಸ್ಟ್ ವತಿಯಿಂದ ನೀಡಲಾಗುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಕೊಡಗು ಜಿಲ್ಲಾ ಭೋವಿ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಸುಜಿತ್ ಅವರಿಗೆ ಪ್ರದಾನ ಮಾಡಲಾಯಿತು. ಕಲ್ಯಾಣ ನಗರದ ಜ್ಞಾನ ಸೌಧ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತಂಜಲಿ ಯೋಗಾಶ್ರಮದ ಶ್ರೀಪ್ರಕಾಶ ಯೋಗಿ ಗುರೂಜಿ, ಸಚಿವ ವಿ.ಸೋಮಣ್ಣ, ಮೇಯರ್ ದಾಸೇಗೌಡ, ಜಾನಪದ ಹಾಡುಗಾರ ಗುರುರಾಜ ಹೊಸಕೋಟೆ ಮತ್ತಿತರ ಪ್ರಮುಖರು ಹಾಜರಿದ್ದು, ಪ್ರಶಸ್ತಿ ವಿತರಿಸಿದರು.