*ಗೋಣಿಕೊಪ್ಪ, ಅ. ೧೧: ಹಾತೂರು ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ರಲ್ಲಿ ರೂ. ೩೨.೪೮ ಲಕ್ಷ ನಿವ್ವಳ ಲಾಭವನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷ ಕೊಡೆಂದೇರ ಪಿ. ಗಣಪತಿ ಮಾಹಿತಿ ನೀಡಿದ್ದಾರೆ.

ಹಾತೂರು ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ೪೪ನೇ ಸಂಘದ ವಾರ್ಷಿಕ ಸಭೆಯಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ತಿಳಿಸಿದರು. ಸಂಘ ೨೦೨೦-೨೧ರ ವರ್ಷಾಂತ್ಯಕ್ಕೆ ೮೬೦.೧೧ ಲಕ್ಷ ಠೇವಣಿ. ೮೧.೨೩ ಲಕ್ಷ ಪಾಲುಬಂಡವಾಳ, ೬೩.೫೫ ಲಕ್ಷ ಕ್ಷೇಮಾನಿಧಿ, ೫೭.೪೪ ಲಕ್ಷ ಇತರೆ ನಿಧಿಯನ್ನು ಹೊಂದಿದೆ. ೨೦೨೦-೨೧ರ ಸಾಲಿನಲ್ಲಿ ಸಂಘವೂ ೬೭೬೯.೪೭ ಲಕ್ಷ ವಾರ್ಷಿಕ ವಹಿವಾಟಿ ನೊಂದಿಗೆ ೪೩೩.೫೭ ಲಕ್ಷ ವ್ಯಾಪಾರ ವಹಿವಾಟನ್ನು ನಡೆಸಿ ೩೨.೪೮ ಲಕ್ಷ ನಿವ್ವಳ ಲಾಭವನ್ನು ಹೊಂದಿದೆ. ಹಾಗೂ ಸಂಘವು ಕಳೆದ ಹತ್ತು ವರ್ಷ ಗಳಲ್ಲಿ ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಪಡೆದುಕೊಂಡಿದೆ. ಹಾಗೂ ಸದಸ್ಯರು ಹೊಂದಿರುವ ಶೇರು ಹಣಕ್ಕೆ ಶೇ. ೧೫ ಡಿವಿಡೆಂಟ್ ಪಾವತಿಸಲು ತೀರ್ಮಾನಿಸಲಾಗಿದೆ ಎಂದರು.

ಬ್ಯಾಂಕಿನ ಆರ್ಥಿಕ ಅಭಿವೃದ್ಧಿ ಗಾಗಿ ಸದಸ್ಯರುಗಳು ಸಂಘದಿAದ ದೊರೆಯುವ ವಿವಿಧ ಸಾಲ ಮತ್ತು ಸೌಲಭ್ಯವನ್ನು ಪಡೆದುಕೊಳ್ಳುವ ಮೂಲಕ ಹಾಗೂ ತಮ್ಮ ಉಳಿತಾಯ ವನ್ನು ಠೇವಣಿ ಇಡುವ ಮೂಲಕ ಗೊಬ್ಬರ ಮತ್ತು ಕೃಷಿ ಪರಿಕರಗಳನ್ನು ಖರೀದಿ ಮಾಡುವ ಮೂಲಕ ಕನಿಷ್ಟ ವ್ಯವಹಾರವನ್ನು ನಡೆಸಬೇಕು ಎಂದು ಸದಸ್ಯರಿಗೆ ಸಲಹೆ ನೀಡಿದರು.

ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಮೂಲಕ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ೭ನೇ ತರಗತಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿ ತರಗತಿ ಗಳ ವಿದ್ಯಾರ್ಥಿಗಳಿಗೆ ಬಹುಮಾನ ವನ್ನು ನೀಡಲಾಯಿತು.

ಸಂಘದ ಉಪಾಧಕ್ಷ÷್ಯ ಎಸ್.ಕೆ. ಮಂದಣ್ಣ, ನಿರ್ದೇಶಕರುಗಳಾದ ಸಿ.ಎಸ್. ಬೋಪಣ್ಣ, ಹೆಚ್.ಡಿ. ಶ್ರೀನಿವಾಸ್, ಎಂ.ಟಿ. ಅಯ್ಯಪ್ಪ, ಕೆ.ಬಿ. ಉತ್ತಪ್ಪ, ಪಿ.ಡಿ. ದಿನೇಶ್, ಬಿ.ಎಸ್. ದುಗ್ಗಪ್ಪ, ಕೆ.ವಿ. ಮುತ್ತಣ್ಣ, ಸಿ.ಜೆ. ರೂಪ, ಕೆ.ಎಂ. ಕಾವೇರಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಪ್ರದೀಪ್, ಕೆ.ಡಿ.ಸಿ.ಸಿ. ಬ್ಯಾಂಕಿನ ಮೇಲ್ವಿಚಾರಕ ಶಂಕರ್ ಉಪಸ್ಥಿತರಿದ್ದರು.