ಕುಶಾಲನಗರ, ಅ. ೧೧: ಕುಶಾಲನಗರದಲ್ಲಿ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ನಡೆಯಿತು.

ಕೊಡಗು ಎಜುಕೇಷನಲ್ ಮತ್ತು ಸೋಶಿಯಲ್ ಸರ್ವಿಸ್ ಟ್ರಸ್ಟ್ ಆಶ್ರಯದಲ್ಲಿ ಜಿಲ್ಲೆಯ ಮಾಜಿ ಸೈನಿಕರ ಸಂಘ, ಕುಶಾಲನಗರ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಭಾರತೀಯ ಸೇನೆಗೆ ಸೇರಬಯಸುವ ಹಾಗೂ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ೧೫ ರಿಂದ ೨೩ ರ ವಯೋಮಿತಿಯ ಯುವಕ - ಯುವತಿಯರಿಗೆ ಮುಕ್ತ ರಸ್ತೆ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಸ್ಪರ್ಧೆಯಲ್ಲಿ ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು, ಮೈಸೂರು, ಹಾಸನ ಮತ್ತಿತರ ಜಿಲ್ಲೆಗಳಿಂದ ೧೪೦ ಯುವಕರು, ೩೫ ಯುವತಿಯರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

ಕುಶಾಲನಗರ ಜೂನಿಯರ್ ಕಾಲೇಜು ಸಮೀಪದ ವಾಟರ್ ಟ್ಯಾಂಕ್ ಬಳಿಯಿಂದ ಓಟದ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಯುವಕರಿಗೆ ೮.೩ ಕಿಮೀ ಹಾಗೂ ಯುವತಿಯರಿಗೆ ೫.೩ ಕಿಮೀ ಓಟದ ಗುರಿ ನೀಡಲಾಗಿತ್ತು. ಕುಶಾಲನಗರ-ಸುಂದರನಗರ-ಗೊAದಿ ಬಸವನಹಳ್ಳಿ-ಕುಶಾಲನಗರ ಮಾರ್ಗದಲ್ಲಿ ಓಟದ ಸ್ಪರ್ಧೆ ನಿಗದಿಪಡಿಸಲಾಗಿತ್ತು.

ಯುವಕರ ಪೈಕಿ ಕೂಡಿಗೆ ಕ್ರೀಡಾಶಾಲಾ ವಿದ್ಯಾರ್ಥಿ ಭೀಮ ಶಂಕರ್ ಪ್ರಥಮ, ಎನ್.ಎ.ಮುರಳೀಧರ್ ದ್ವಿತೀಯ, ಟಿ.ಕೆ.ರಾಮಪ್ಪ ತೃತೀಯ, ಪಿ.ಎಸ್.ದೀಕ್ಷಿತ್, ಪ್ರಜ್ವಲ್, ಪ್ರಶಾಂತ್ ಕ್ರಮವಾಗಿ ನಂತರದ ಮೂರು ಸ್ಥಾನಗಳನ್ನು ಪಡೆದರು.

ಯುವತಿಯರಲ್ಲಿ ಕುಶಾಲನಗರ ಜ್ಞಾನಭಾರತಿ ೧೦ನೇ ತರಗತಿ ವಿದ್ಯಾರ್ಥಿನಿ ಟಿ.ಪಿ.ಚೈತ್ರ ಪ್ರಥಮ, ಕೆ.ಜಿ.ರಿಯಾ ದ್ವಿತೀಯ, ಬಿ.ಯು.ಭವ್ಯ ತೃತೀಯ, ಕೆ.ಡಿ.ಸನ್ನಿಧಿ, ಯು.ಎನ್. ಕುಶಿರ, ಎ.ಪಿ.ಬಿಂದು ಕ್ರಮವಾಗಿ ನಂತರದ ಮೂರು ಸ್ಥಾನಗಳನ್ನು ಪಡೆದರು.

ಟ್ರಸ್ಟ್ ಪ್ರಮುಖರಾದ ಮಂಡೆಪAಡ ಕೆ.ಚಂಗಪ್ಪ, ಮೇ.ಜ. ಅರ್ಜುನ್ ಮುತ್ತಣ್ಣ, ಕ್ಯಾ.ಪಟ್ಟಡ ಎಸ್.ಕಾರ್ಯಪ್ಪ, ಬೊಪ್ಪಂಡ ಕೆ.ಸುಬ್ರಮಣಿ, ಪ್ರಮುಖರಾದ ಅಮೆ ಜನಾರ್ಧನ್, ನರೇಶ್, ದೈಹಿಕ ಶಿಕ್ಷಣ ಶಿಕ್ಷಕ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ರೆಡ್ ಕ್ರಾಸ್ ಘಟಕದ ಎಸ್.ಕೆ.ಸತೀಶ್, ಸಂತೋಷ್, ಎಚ್.ಎಂ.ಚAದ್ರು, ವೆಂಕಟೇಶ್, ಬಿ.ಜೆ.ಅಣ್ಣಯ್ಯ ಮತ್ತಿತರ ಪ್ರಮುಖರು ಇದ್ದರು.