ಪೊನ್ನಂಪೇಟೆ, ಅ. ೧೦: ಜೆಸಿಐ ಭಾರತದ ಅಧೀನದಲ್ಲಿ ನೂತನವಾಗಿ ಜಾರಿಗೆ ಬಂದಿರುವ 'ಸೀನಿಯರ್ ಮೆಂಬರ್ ಅಸೋಸಿಯೇಷನ್- ಎಸ್.ಎಂ.ಎ.' (ಹಿರಿಯ ಸದಸ್ಯರ ಸಂಘ)ನ ವಲಯ ೧೪ರ ಸಂಸ್ಥಾಪನಾ ವಲಯ ಮಂಡಳಿಗೆ ಕೊಡಗಿನ ಮೂವರು ಸ್ಥಾಪಕ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಮೈಸೂರಿನ ಕೆ.ಎಸ್. ಕುಮಾರ್ ಅವರ ನೇತೃತ್ವದ ವಲಯ ೧೪ರ ನೂತನ ವಲಯ ಮಂಡಳಿಯ ಕೋಶಾಧಿಕಾರಿಗಳಾಗಿ ಜೆಸಿಐ ಕುಶಾಲನಗರ ಕಾವೇರಿ ಘಟಕದ ಪೂರ್ವಾಧ್ಯಕ್ಷ ಎಂ.ಡಿ. ರಂಗಸ್ವಾಮಿ, ವಲಯದ ಫೌಂಡೇಶನ್ ಅಧಿಕಾರಿಯಾಗಿ ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕದ ಪೂರ್ವಾಧ್ಯಕ್ಷ ಬಿ.ಈ. ಅರುಣ್ ಕುಮಾರ್ ಮತ್ತು ವಲಯ ಸಂಯೋಜಕರಾಗಿ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಪೂರ್ವಾಧ್ಯಕ್ಷ ಬಿ.ಇ. ಕಿರಣ್ ಅವರು ಆಯ್ಕೆಗೊಂಡಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಇತ್ತೀಚಿಗೆ ನಡೆದ ನೂತನ ರಾಷ್ಟಿçÃಯ ಮಂಡಳಿ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದಲ್ಲಿ ಈ ನೂತನ ವಲಯ ಮಂಡಳಿಯ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ತಾ.೧೯ರಂದು ಮೈಸೂರಿನಲ್ಲಿ ನಡೆಯುವ ವಲಯ ಮಂಡಳಿಯ ಉದ್ಘಾಟನಾ ಸಮಾರಂಭದಲ್ಲಿ ಇವರು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಎಂ.ಡಿ. ರಂಗಸ್ವಾಮಿಯವರು ಕಳೆದ ಹಲವು ವರ್ಷಗಳಿಂದ ವಿವಿಧ ಸಮಾಜಮುಖಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿ. ಈ. ಅರುಣ್ ಕುಮಾರ್ ಅವರು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಸೋಮವಾರಪೇಟೆಯ ಪ್ರತಿಷ್ಠಿತ ಬ್ಲೂಸ್ಟಾರ್ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿಗಳಾಗಿ ಕಳೆದ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಗೋಣಿಕೊಪ್ಪಲಿನ ಬಿ. ಈ. ಕಿರಣ್ ಅವರು ಅರುವತ್ತೋಕ್ಲುವಿನ ಶ್ರೀ ಶಾರದಾಂಬ ದಸರಾ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಗೋಣಿಕೊಪ್ಪಲಿನ ದಿ. ಮರ್ಚೆಂಟ್ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.