ಕುಶಾಲನಗರ, ಅ. ೧೦: ಕುಶಾಲನಗರದ ಅಲ್ ಇಹ್ಸಾನ್ ಅಸೋಸಿಯೇಷನ್ ವತಿಯಿಂದ ಅನಾಥ, ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಕುಶಾಲನಗರದ ಶಾದಿಮಹಲ್‌ನಲ್ಲಿ ಅನಾಥ ಮತ್ತು ಬಡ ಹೆಣ್ಣುಮಕ್ಕಳ ನಾಲ್ಕನೇ ವರ್ಷದ ಉಚಿತ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಕೊರೊನಾ ನಡುವೆ ಜನಜೀವನ ಸಂಕಷ್ಟದಲ್ಲಿರುವ ಸಮಯದಲ್ಲಿ ಸಂಘಟನೆ ಮಾನವೀಯ ಮೌಲ್ಯವುಳ್ಳ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ. ಮುಂದೆಯೂ ಇನ್ನೂ ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸ ಕಾರ್ಯಗಳು ನಡೆಯಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಶಾಲನಗರ ಹಿಲಾಲ್ ಮಸೀದಿ ಧರ್ಮಗುರುಗಳಾದ ಸೂಫಿ ದಾರಿಮಿ, ಅನಾಥ ಮಕ್ಕಳಿಗೆ ಸಹಾಯ ಹಸ್ತವನ್ನು ತೋರುವುದು ಇಸ್ಲಾಂ ಧರ್ಮದಲ್ಲಿ ಅತ್ಯಂತ ಪುಣ್ಯದ ಕೆಲಸವಾಗಿದೆ. ತಮ್ಮ ವೈಯಕ್ತಿಕ ಬದುಕು ಹಾಗೂ ವ್ಯವಹಾರಿಕ ಜೀವನವನ್ನು ಬದಿಗೊತ್ತಿ, ಇಂತಹ ಕಾರ್ಯಕ್ರಮ ನಡೆಸಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಮುಖ್ಯೋಪಾಧ್ಯಾಯರಾದ ನಜೀರ್ ಅಹಮದ್, ದಾರುಲ್ ಉಲೂಂ ಮದ್ರಸ ಪ್ರಾಂಶುಪಾಲg ಎಂ. ತಮ್ಲೀಕ್ ದಾರಿಮಿ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎA.ಚರಣ್, ಉದ್ಯಮಿ ಎಂ.ಕೆ. ದಿನೇಶ್, ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಷಂಶುದ್ಧೀನ್, ಹಿಲಾಲ್ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್, ಇಕ್ಬಾಲ್ ಮುಸ್ಲಿಯಾರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಇಹ್ಸಾನ್ ಅಸೋಸಿಯೇಷನ್ ಅಧ್ಯಕ್ಷ ಎಂ.ಇ. ಮುಸ್ತಫಾರವರು ವಹಿಸಿದ್ದರು. ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಸ್ವಾಗತಿಸಿದರು. ದಾರುಲ್ ಉಲೂಂ ಮದ್ರಸದ ಅಧ್ಯಾಪಕ ಇಬ್ರಾಹೀಂ ಬಾದುಷಾರವರು ಕಾರ್ಯಕ್ರವನ್ನು ನಿರೂಪಿಸಿದರು.
ಅಲ್ ಇಹ್ಸಾನ್ ಅಸೋಸಿಯೇಷನ್ ನಾಲ್ಕನೇ ವರ್ಷದ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಕೊಡಗಿನ ಎಮ್ಮೆಮಾಡು, ೭ನೇ ಹೊಸಕೋಟೆ, ಕಂಬಿಬಾಣೆ ಹಾಗೂ ವೀರಭೂಮಿ ಬಡ ಹೆಣ್ಣು ಮಕ್ಕಳ ಮದುವೆಯನ್ನು ನಡೆಸಲಾಯಿತು.
ಈ ಸಂದರ್ಭ ಹಿಲಾಲ್ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಉದ್ಯಮಿ ಎಂ.ಎA. ಶಾಹಿರ್, ಹಿಲಾಲ್ ಮಸೀದಿ ಮಾಜಿ ಅಧ್ಯಕ್ಷ ಬಿ.ಎ.ಇಬ್ರಾಹೀಂ, ಎ.ಸಲೀಂ, ಜಾಮಿಯಾ ಮಸೀದಿ ಅಧ್ಯಕ್ಷ ಎನ್.ಅಲೀಂ, ತಕ್ವಾ ಮಸೀದಿ ಅಧ್ಯಕ್ಷ ಅಹಮದ್ ಹುಸೇನ್, ನೂರ್ ಮಸ್ಜಿದ್ ಅಧ್ಯಕ್ಷ ಇರ್ಫಾನ್, ಬಿಲಾಲ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಮುಜೀಬ್, ಪ.ಪಂ ಸದಸ್ಯ ಕಲೀಮುಲ್ಲಾ, ಅಲ್ ಇಹ್ಸಾನ್ ಸಂಘಟನೆಯ ಪದಾಧಿಕಾರಿಗಳಾದ ಅಶ್ರಫ್, ಶಾಫಿ, ಜಲೀಲ್, ಅಲಿಯಬ್ಬ, ಬಷೀರ್, ಇಬ್ರಾಹೀಂ, ಅಬೂಬಕ್ಕರ್, ಮಹಮ್ಮದ್ ಶರೀಫ್, ಮುನಾಫ್ ಹಾಗೂ ಇನ್ನಿತರರು ಇದ್ದರು.