(ನಿನ್ನೆಯ ಸಂಚಿಕೆಯಿAದ)

ವರ್ಷ ೧೯೨೧ ಗುಂಡುಕುಟ್ಟಿ ಮಂಜಯ್ಯನವರು (ಜಿ.ಎಂ. ಮಂಜುನಾಥಯ್ಯನವರ ತಂದೆ) ನಿಧಿಯ ಮಕ್ಕಳಿಗೆಂದು ರೂ. ೪೦೦ ನೀಡಿ ಈ ಮೊತ್ತವನ್ನು ಮಕ್ಕಳ ಓದುವಿಕೆಗೆ, ದೀಪಕ್ಕೆ ಬೇಕಾದ ಸೀಮೆಎಣ್ಣೆಗೆ ಬಳಸಲು ತಿಳಿಸಿದರು. ಸಮಿತಿಯ ಸದಸ್ಯ ಸಿ.ಎನ್. ವೆಂಕಪ್ಪಯ್ಯ ಅವರು (ಟೌನ್ ಸಹಕಾರ ಬ್ಯಾಂಕ್‌ನ ಸ್ಥಾಪಕರು) ತಮ್ಮ ಬ್ಯಾಂಕ್‌ನಲ್ಲಿ ಈ ಹಣವನ್ನು ನಿರಖು ಠೇವಣಿಯಾಗಿಟ್ಟರು. ವೆಂಕಪ್ಪಯ್ಯ ಅವರು ಬಿಡುವಿಲ್ಲದ ವಕೀಲರಾಗಿದ್ದರೂ, ಸಮಾಜದಲ್ಲಿ ಬೇರೆ ಬೇರೆ ಜವಾಬ್ದಾರಿಕೆಗಳಿದ್ದರೂ ೧೯೨೪-೨೬ ರಲ್ಲಿ ಜನರಿಂದ ಚಂದಾಎತ್ತಿ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಕಟ್ಟಡವನ್ನು ದುರಸ್ತಿಗೊಳಿಸಿದರು. ೧೯೨೫ ರಲ್ಲಿ ಮೂರ್ನಾಡು, ೨೭ ರಲ್ಲಿ ವೀರಾಜಪೇಟೆಯಲ್ಲಿ ಸಭೆ ನಡೆಸಿದ ನಂತರ ಸಭೆಗಳನ್ನು ನಿಧಿ ಆವರಣದಲ್ಲೆ ನಡೆಸಲು ಪ್ರಾರಂಭಿಸಿದರು. ನಂತರ ಇದೇ ವೆಂಕಪ್ಪಯ್ಯ ಅವರು ೧೯೩೬ ರಲ್ಲಿ ದೊಡ್ಡದಾದ ಹಾಲ್ ಒಂದನ್ನು ಕಟ್ಟಿಸಿದರು. ಅದೇ ವರ್ಷ ನಡೆದ ಮಹಾಸಭೆಯಲ್ಲಿ ಕೀರ್ತಿಶೇಷರಾದ ನಿಡ್ತದ ಸುಬ್ಬಣ್ಣಯ್ಯನವರ ಮತ್ತು ಗುಂಡುಕುಟ್ಟಿ ಮಂಜಯ್ಯನವರ ಭಾವಚಿತ್ರಗಳನ್ನು ಸಿ.ಎಂ. ರಾಮರಾಯರು ಅನಾವರಣ ಮಾಡಿದರು.

ಋಷಿ ಸದೃಶ ವ್ಯಕ್ತಿ ಬೆಟ್ಟತ್‌ನಾಡು ಕೃಷ್ಣಯ್ಯನವರು ಮೂಲತಃ ಪೊನ್ನಂಪೇಟೆಯವರು. ಇವರು ಸರಕಾರೀ ವೃತ್ತಿಯಿಂದ ನಿವೃತ್ತರಾದ ಮೇಲೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ತುಂಬಾ ಕಾಳಜಿ ವಹಿಸಿದರು. ಸ್ವತಃ ಮಕ್ಕಳಿಲ್ಲದ ಇವರು ನಾಲ್ವರು ಕನ್ಯೆಯರನ್ನು ಸಾಕಿಕೊಂಡು ವಿವಾಹ ಮಾಡಿಕೊಟ್ಟು ಅವರಿಗೆ ಜೀವನ ಕಾಣಿಸಿದರು. ಈ ಮಹಾನುಭಾವರು ತಮ್ಮ ಕಗ್ಗೋಡ್ಲು ಆಸ್ತಿ ೧೦ ಎಕರೆ ಗದ್ದೆ, ೩೦ ಎಕರೆ ಜಾಗವನ್ನು ನಿಧಿಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ದಾನ ರೂಪದಲ್ಲಿ ಕೊಟ್ಟರು. ಇವರು ಕಾರ್ಯನಿಮಿತ್ತ ಪೊನ್ನಂಪೇಟೆಯಿAದ ಮಡಿಕೇರಿಗೆ ಬಂದಾಗಲೆಲ್ಲಾ ವಿದ್ಯಾರ್ಥಿ ಭವನದಲ್ಲಿ ವಿದ್ಯಾರ್ಥಿಗಳ ಜೊತೆ ಉಳಿಯುತ್ತಿದ್ದರು. ತಾ. ೬.೪.೧೯೪೦ ರಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸಿ.ಎಂ. ರಾಮರಾಯರು ಕೃಷ್ಣಯ್ಯನವರ ಭಾವಚಿತ್ರವನ್ನು ಅನಾವರಣ ಮಾಡುತ್ತಾ ‘... ವಿದ್ಯಾರ್ಥಿಗಳಿಗೆ ವಾಸಿಸಲು ನಿಡ್ತದ ಸುಬ್ಬಣ್ಣಯ್ಯನವರು, ಓದುವ ಬೆಳಕನ್ನು ಗುಂಡುಕುಟ್ಟಿ ಮಂಜಯ್ಯನವರು ಮತ್ತು ಈಗ ಬೆಟ್ಟತ್ತನಾಡು ಕೃಷ್ಣಯ್ಯನವರು ಅನ್ನವನ್ನು (ನಿನ್ನೆಯ ಸಂಚಿಕೆಯಿAದ)

ವರ್ಷ ೧೯೨೧ ಗುಂಡುಕುಟ್ಟಿ ಮಂಜಯ್ಯನವರು (ಜಿ.ಎಂ. ಮಂಜುನಾಥಯ್ಯನವರ ತಂದೆ) ನಿಧಿಯ ಮಕ್ಕಳಿಗೆಂದು ರೂ. ೪೦೦ ನೀಡಿ ಈ ಮೊತ್ತವನ್ನು ಮಕ್ಕಳ ಓದುವಿಕೆಗೆ, ದೀಪಕ್ಕೆ ಬೇಕಾದ ಸೀಮೆಎಣ್ಣೆಗೆ ಬಳಸಲು ತಿಳಿಸಿದರು. ಸಮಿತಿಯ ಸದಸ್ಯ ಸಿ.ಎನ್. ವೆಂಕಪ್ಪಯ್ಯ ಅವರು (ಟೌನ್ ಸಹಕಾರ ಬ್ಯಾಂಕ್‌ನ ಸ್ಥಾಪಕರು) ತಮ್ಮ ಬ್ಯಾಂಕ್‌ನಲ್ಲಿ ಈ ಹಣವನ್ನು ನಿರಖು ಠೇವಣಿಯಾಗಿಟ್ಟರು. ವೆಂಕಪ್ಪಯ್ಯ ಅವರು ಬಿಡುವಿಲ್ಲದ ವಕೀಲರಾಗಿದ್ದರೂ, ಸಮಾಜದಲ್ಲಿ ಬೇರೆ ಬೇರೆ ಜವಾಬ್ದಾರಿಕೆಗಳಿದ್ದರೂ ೧೯೨೪-೨೬ ರಲ್ಲಿ ಜನರಿಂದ ಚಂದಾಎತ್ತಿ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಕಟ್ಟಡವನ್ನು ದುರಸ್ತಿಗೊಳಿಸಿದರು. ೧೯೨೫ ರಲ್ಲಿ ಮೂರ್ನಾಡು, ೨೭ ರಲ್ಲಿ ವೀರಾಜಪೇಟೆಯಲ್ಲಿ ಸಭೆ ನಡೆಸಿದ ನಂತರ ಸಭೆಗಳನ್ನು ನಿಧಿ ಆವರಣದಲ್ಲೆ ನಡೆಸಲು ಪ್ರಾರಂಭಿಸಿದರು. ನಂತರ ಇದೇ ವೆಂಕಪ್ಪಯ್ಯ ಅವರು ೧೯೩೬ ರಲ್ಲಿ ದೊಡ್ಡದಾದ ಹಾಲ್ ಒಂದನ್ನು ಕಟ್ಟಿಸಿದರು. ಅದೇ ವರ್ಷ ನಡೆದ ಮಹಾಸಭೆಯಲ್ಲಿ ಕೀರ್ತಿಶೇಷರಾದ ನಿಡ್ತದ ಸುಬ್ಬಣ್ಣಯ್ಯನವರ ಮತ್ತು ಗುಂಡುಕುಟ್ಟಿ ಮಂಜಯ್ಯನವರ ಭಾವಚಿತ್ರಗಳನ್ನು ಸಿ.ಎಂ. ರಾಮರಾಯರು ಅನಾವರಣ ಮಾಡಿದರು.

ಋಷಿ ಸದೃಶ ವ್ಯಕ್ತಿ ಬೆಟ್ಟತ್‌ನಾಡು ಕೃಷ್ಣಯ್ಯನವರು ಮೂಲತಃ ಪೊನ್ನಂಪೇಟೆಯವರು. ಇವರು ಸರಕಾರೀ ವೃತ್ತಿಯಿಂದ ನಿವೃತ್ತರಾದ ಮೇಲೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ತುಂಬಾ ಕಾಳಜಿ ವಹಿಸಿದರು. ಸ್ವತಃ ಮಕ್ಕಳಿಲ್ಲದ ಇವರು ನಾಲ್ವರು ಕನ್ಯೆಯರನ್ನು ಸಾಕಿಕೊಂಡು ವಿವಾಹ ಮಾಡಿಕೊಟ್ಟು ಅವರಿಗೆ ಜೀವನ ಕಾಣಿಸಿದರು. ಈ ಮಹಾನುಭಾವರು ತಮ್ಮ ಕಗ್ಗೋಡ್ಲು ಆಸ್ತಿ ೧೦ ಎಕರೆ ಗದ್ದೆ, ೩೦ ಎಕರೆ ಜಾಗವನ್ನು ನಿಧಿಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ದಾನ ರೂಪದಲ್ಲಿ ಕೊಟ್ಟರು. ಇವರು ಕಾರ್ಯನಿಮಿತ್ತ ಪೊನ್ನಂಪೇಟೆಯಿAದ ಮಡಿಕೇರಿಗೆ ಬಂದಾಗಲೆಲ್ಲಾ ವಿದ್ಯಾರ್ಥಿ ಭವನದಲ್ಲಿ ವಿದ್ಯಾರ್ಥಿಗಳ ಜೊತೆ ಉಳಿಯುತ್ತಿದ್ದರು. ತಾ. ೬.೪.೧೯೪೦ ರಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸಿ.ಎಂ. ರಾಮರಾಯರು ಕೃಷ್ಣಯ್ಯನವರ ಭಾವಚಿತ್ರವನ್ನು ಅನಾವರಣ ಮಾಡುತ್ತಾ ‘... ವಿದ್ಯಾರ್ಥಿಗಳಿಗೆ ವಾಸಿಸಲು ನಿಡ್ತದ ಸುಬ್ಬಣ್ಣಯ್ಯನವರು, ಓದುವ ಬೆಳಕನ್ನು ಗುಂಡುಕುಟ್ಟಿ ಮಂಜಯ್ಯನವರು ಮತ್ತು ಈಗ ಬೆಟ್ಟತ್ತನಾಡು ಕೃಷ್ಣಯ್ಯನವರು ಅನ್ನವನ್ನು ರೂ. ೩೦೦ ದತ್ತಿನಿಧಿ ಇಟ್ಟು ಅದರ ಬಡ್ಡಿ ಹಣವನ್ನು ಶಾಲೆಯ ಯೋಗ್ಯ ಹುಡುಗನಿಗೆ ಪ್ರೋತ್ಸಾಹ ಧನವಾಗಿ ಕೊಡಬೇಕೆಂದು ವಿನಂತಿಸಿಕೊAಡರು.

೨೮.೪.೧೯೫೬ ರಂದು ನಿಧಿಗೆ ವಿಶೇಷ ಸೇವೆ ಸಲ್ಲಿಸುತ್ತಿದ್ದ ವೆಂಕಪ್ಪಯ್ಯನವರ ಭಾವಚಿತ್ರವನ್ನು ಸ್ವತಃ ಮಂಜನಾಥಯ್ಯನವರು ಅನಾವರಣ ಮಾಡಿದರು. ಅಂದಿನ ಈ ಎಲ್ಲಾ ವಿವರಣೆಗಳನ್ನು ಆಳವಾಗಿ ಗಮನಿಸಿದರೆ ಸಮಾಜದಲ್ಲಿ ಐಶ್ವರ್ಯವಂತರ ಸಂಖ್ಯೆ ಅಧಿಕವಾಗಿಲ್ಲದಿದ್ದರೂ ಅವರನ್ನೊಳಗೊಂಡAತೆ ಜನಸಾಮಾನ್ಯರಿಗೂ ನಮ್ಮ ನಿಧಿಗೆ ನಾವೇನಾದರೂ ಕೊಡಬೇಕೆಂಬ ತುಡಿತ ಕಾಣುತ್ತಿತ್ತು. ಈ ನಿಟ್ಟಿನಲ್ಲಿ ನಮ್ಮ ಹಿರಿಯರೆಲ್ಲರೂ ಈಗಿನ ತರುಣ ಜನಾಂಗಕ್ಕೆ ಆದರ್ಶ ಪ್ರಾಯರಾಗಿದ್ದರು ಎಂದು ಧಾರಾಳವಾಗಿ ಹೇಳಬಹುದು ಎಂದು ಭಾವಿಸುತ್ತೇನೆ.

ನಿಧಿ ಬೆಳೆಯುತ್ತಾ ಬಂದAತೆ ಜನರಿಗೆ ಆರ್ಥಿಕವಾಗಿ ಅದೆಷ್ಟು ಹಣದ ಅವಶ್ಯಕತೆ ಇರುತ್ತಿತ್ತು ಎಂಬುದನ್ನು ಮುಂದೆ ಗಮನಿಸಬಹುದು. ರೂ. ೧೦೦, ೨೦೦, ೫೦೦ ರೂಪಾಯಿಗಳಿಗೂ ಸಾಲದ ಅರ್ಜಿ, ಅದಕ್ಕೆ ಜಾಮೀನು, ನಿಗದಿತ ಬಡ್ಡಿ, ಸಕಾಲದಲ್ಲಿ ಮರುಪಾವತಿ!! ಅದಕ್ಕೆ ಸರಿಯಾದ ಲೆಕ್ಕಪತ್ರಗಳು, ಲೆಕ್ಕ ಪರಿಶೋಧನೆ (ಂuಜiಣ)!! ಇದರ ಜೊತೆಗೆ ಸಣ್ಣಪುಟ್ಟ ಹಿಡುವಳಿದಾರರು ಕಾಫಿ ಕೃಷಿಕರು, ಏಲಕ್ಕಿ ಬೆಳೆಸುವವರು ‘ತಮ್ಮನಿಧಿ’ ಎಂಬ ಅಭಿಮಾನದಿಂದ ತಮಗೆ ಬೇಕಾದವರ ಹೆಸರಲ್ಲಿ ಸಣ್ಣಪುಟ್ಟ ದತ್ತಿ ನಿಧಿಗಳನ್ನು ಇಟ್ಟು ಸಂತೋಷಪಡುತ್ತಿದ್ದರು. ನಿಧಿಯ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತಿದ್ದಂತೆ ಮತ್ತು ಸಾಲ ಕೊಡುವುದು, ಹಣ ಹಿಂದೆ ಪಡೆಯುವುದು, ಅಲ್ಲಿ ಇಲ್ಲಿ ಸಾಲ ಬಾಕಿ, ಅದರ ವಸೂಲಿ ಪ್ರಯತ್ನ ಇವೆಲ್ಲಾ ಅನವಶ್ಯ ತೊಂದರೆಗಳು ಎಂದು ಭಾವಿಸಿದ ಆಡಳಿತ ಮಂಡಳಿ ೧೯೪೭ ರಲ್ಲಿ ಪ್ರಥಮ ಬಾರಿಗೆ ಆರಿಸಿದ ೧೦ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ. ೩ ರಂತೆ ೧೨ ತಿಂಗಳಿಗೆ ೩೬ ರೂಪಾಯಿಗಳ ವಿದ್ಯಾರ್ಥಿ ವೇತನ ಕೊಡಲಾರಂಭಿಸಿತು!! ೧೯೪೭ ರಲ್ಲಿ ಪ್ರಾರಂಭವಾದ ಮೊತ್ತ ಕೇವಲ ೧೯ ವರ್ಷಗಳಲ್ಲಿ ಎಂದರೆ ೧೯೬೬ ರಲ್ಲಿ ರೂ. ೬೦,೦೦೦ ಕ್ಕೆ ನೆಗೆದದ್ದು ಗಮನಿಸಿದಾಗ ನಿಧಿಯ ಬಗ್ಗೆ ಹೆಮ್ಮೆ ಎನಿಸುತ್ತದೆ.

೧೯೬೨ ರಲ್ಲಿ ಮಳೆಯ ಅವಾಂತರ ಮುಂದಿನ ಕಂತಿನಲ್ಲಿ.

(ಮುAದುವರಿಯುವುದು)

- ಜಿ. ಟಿ. ರಾಘವೇಂದ್ರ, ಸಲಹೆಗಾರ, ಮಡಿಕೇರಿ.