ಗೋಣಿಕೊಪ್ಪಲು, ಅ. ೯: ವೀರಾಜಪೇಟೆ ತಾಲೂಕು ಮಹಿಳಾ ಮೋರ್ಚಾ ವತಿಯಿಂದ ಸೇವಾ ಸಪ್ತಾಹ ಕಾರ್ಯಕ್ರಮವು ದಿಡ್ಡಳ್ಳಿ ಹಾಡಿಯಲ್ಲಿ ಜರುಗಿತು. ಈ ಸಂದರ್ಭ ಅಮ್ಮತ್ತಿ ಹೊಸೂರು ಶಕ್ತಿ ಕೇಂದ್ರ ವ್ಯಾಪ್ತಿಯ ಕಿಶೋರಿಯರಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ಕಬ್ಬಿಣಾಂಶದ ಮಾತ್ರೆಗಳನ್ನು ವಿತರಿಸಲಾಯಿತು.

ಮಾಲ್ದಾರೆ ಮತ್ತು ಚೆನ್ನಯ್ಯನ ಕೋಟೆ ಶಕ್ತಿ ಕೇಂದ್ರದ ಪ್ರಮುಖರು ಭಾಗವಹಿಸಿದ್ದರು. ಮಾಲ್ದಾರೆ ಮಹಿಳಾ ಮೋರ್ಚಾದ ಪ್ರಮುಖರಾದ ಜ್ಯೋತಿ ಕುಶಾಲಪ್ಪ ಮತ್ತು ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಕವಿತ ಬೋಜಪ್ಪ, ಪ್ರಧಾನ ಕಾರ್ಯದರ್ಶಿ ಶಿಲ್ಪ ಅಪ್ಪಣ್ಣ, ರೇಖಾ ಗಣಪತಿ, ಉಪಾಧ್ಯಕ್ಷೆ ಸಜಿತ ರವೀಂದ್ರ, ಸಾಮಾಜಿಕ ಜಾಲತಾಣದ ಪ್ರಮುಖರಾದ ಕಾವ್ಯ ಮಧು, ರಿಶ ಸುನಿಲ್ ಉಪಸ್ಥಿತರಿದ್ದರು.

ಹೊಸೂರಿನಲ್ಲಿ ಮೋರ್ಚಾದ ಪ್ರಮುಖರಾದ ಪಂದ್ಯAಡ ಶಾಂತಿ ಮುಂದಾಳತ್ವದಲ್ಲಿ ಪಕ್ಷದ ಸದಸ್ಯರುಗಳು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಜಯಂತಿ ಆಚರಿಸಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿದರು.