ಮಡಿಕೇರಿ, ಅ. ೯: ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕುಬ್ ಹಾಗೂ ಸಮಾಜ ಸೇವಕ ಕಲೀಲ್ ಕ್ರಿಯೇಟಿವ್ ಅವರನ್ನು ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.

ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಸ್ತಿçÃರೋಗ ಮತ್ತು ಪ್ರಸೂತಿ ವಿಭಾಗದ ವತಿಯಿಂದ ನಡೆದ ಸ್ತನ ಕ್ಯಾನ್ಸರ್, ಗರ್ಭಕೋಶ, ಬಾಯಿಯ ಕ್ಯಾನ್ಸರ್ ತಪಾಸಣಾ ಶಿಬಿರ ಹಾಗೂ ಹರ್ನಿಯಾ, ಆಂದ್ರವಾಯು ತಪಾಸಣೆ ಮತ್ತು ಉಚಿತ ಶಸ್ತçಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಶಾಸಕ ಯು.ಟಿ. ಖಾದರ್ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಡಾ. ಸತೀಶ್ ಭಂಡಾರಿ, ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಜಿಲ್ಲಾ ನೋಡಲ್ ಅಧಿಕಾರಿ ಡಾ. ರತ್ನಾಕರ್, ಪ್ರಮುಖರಾದ ಡಾ. ಜಯರಾಮ ಶೆಟ್ಟಿ, ಡಾ. ಮೊಹಮ್ಮದ್ ಇಸ್ಮಾಯಿಲ್ ಹಾಜರಿದ್ದರು.

ತಾ.೩೧ರ ವರೆಗೆ ಸ್ತಿçÃರೋಗ ಮತ್ತು ಪ್ರಸೂತಿ ವಿಭಾಗದ ವತಿಯಿಂದ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಬಾಯಿಯ ಕ್ಯಾನ್ಸರ್ ತಪಾಸಣಾ ಶಿಬಿರ ಹಾಗೂ ಹರ್ನಿಯಾ, ಆಂದ್ರವಾಯು ತಪಾಸಣೆ ಮತ್ತು ಉಚಿತ ಶಸ್ತçಚಿಕಿತ್ಸಾ ಶಿಬಿರ ಉಚಿತವಾಗಿ ನಡೆಯಲಿದೆ. ಗರ್ಭಕೋಶದ ಕ್ಯಾನ್ಸರ್ ಪತ್ತೆಹಚ್ಚುವಿಕೆ ಪ್ಯಾಪ್ ಸ್ಮಿಯರ್ ಉಚಿತವಾಗಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ೯೬೬೩೭ ೨೮೭೧೬ ಸಂಪರ್ಕಿಸಬಹುದಾಗಿದೆ.