ಮಡಿಕೇರಿ, ಅ. ೯: ಜಿಲ್ಲೆಯ ವಿವಿಧ ರಾಜಕೀಯ ಮುಖಂಡರನ್ನು ಭೇಟಿ ಮಾಡಿದ ಸಿ.ಎನ್.ಸಿ ಸದಸ್ಯರು ಕೊಡವ ಜನಾಂಗಕ್ಕೆ ದೊರಕಬೇಕಾಗಿ ರುವ ಬುಡಕಟ್ಟು ಸ್ಥಾನಮಾನದ ಕುರಿತ ಮನವಿಯ ಜ್ಞಾಪನಾ ಪತ್ರಗಳನ್ನು ನೀಡಿದರು. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ಯು.ನಾಚಪ್ಪ ನೇತೃತ್ವದಲ್ಲಿ ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಎಸ್ ಪಕ್ಷಗಳ ಮುಖಂಡರು ಸೇರಿದಂತೆ ಜನಪ್ರತಿನಿಧಿಗಳನ್ನು, ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ದೊರಕುವ ಸಂಬAಧ ತಾ.೮ ರಂದು ಭೇಟಿ ಮಾಡಿ ಚರ್ಚಿಸಲಾಯಿತು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ ಸುನಿಲ್ ಸುಬ್ರಮಣಿ ಹಾಗೂ ಶಾಂತೆಯAಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್ ಅವರುಗಳನ್ನು ಸಿ.ಎನ್.ಸಿ ಸದಸ್ಯರು ಭೇಟಿ ಮಾಡಿ ಕೊಡವ ಜನಾಂಗಕ್ಕೆ ದೊರಕಬೇಕಾದ ಬುಡಕಟ್ಟು ಸ್ಥಾನಮಾನದ ಕುರಿತು ಚರ್ಚಿಸಿದರು. ಬಿ.ಜೆ.ಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರಿಗೂ ಜ್ಞಾಪನಾ ಪತ್ರವನ್ನು ಕಳಿಸಲಾಯಿತು.

ಕಾಶ್ಮೀರಕ್ಕೆ ಕಾಶ್ಮೀರಿ ಪಂಡಿತರು ಹೇಗೆ ಮೂಲ ನಿವಾಸಿಗಳೊ, ಅದೇ ರೀತಿ ಕೊಡವರು ಕೊಡಗಿನ ಮೂಲ ನಿವಾಸಿಗಳು. ಆದರೆ ನಮ್ಮ ಇರುವಿಕೆಗೆ ದಕ್ಕೆ ತರುವಂತಹ ಕೆಲಸಗಳು ಇತ್ತೀಚೆಗೆ ಆಗುತ್ತಿದೆ. ಗೆಜೆಟಿಯರ್ ಆಫ್ ಕೂರ್ಗ್ನಲ್ಲಿ ಕೂಡ ಕೊಡವರ ಬುಡಕಟ್ಟು ಆಚಾರ-ವಿಚಾರಗಳ ಬಗ್ಗೆ ಉಲ್ಲೇಖವಿದೆ. ನಮ್ಮ ಸಂವಿಧಾನ್ವಿಕ ಹಕ್ಕಾಗಿರುವ ಬುಡಕಟ್ಟು ಸ್ಥಾನಮಾನದ ಕುರಿತು ಸಿ.ಎನ್.ಸಿ ಸತತವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಕೊಡಗಿನ ಮೂಲೆ-ಮೂಲೆಯ ಗ್ರಾಮಗಳ ಮಂದ್‌ಗಳಲ್ಲಿ ಸಭೆ, ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಇದರಿಂದಾಗಿ ಜನಾಂಗದವರಿಗೆ ಬುಡಕಟ್ಟು ಸ್ಥಾನಮಾನದ ಹಕ್ಕಿನ ಕುರಿತು ಅರಿವಾಗಿದೆ.

ಬುಡಕಟ್ಟು ಸ್ಥಾನಮಾನದ ಕುರಿತು ನಡೆಸುತ್ತಿದ್ದ ಅಧ್ಯಯನ ಸಮರ್ಪಕವಾಗಿ ಆಗದ ಕಾರಣ ಸಿ.ಎನ್.ಸಿ ಆಕ್ಷೇಪ ಹಿನ್ನೆಲೆ ಮರು ಅಧ್ಯಯನ ನಡೆಯುತ್ತಿದ್ದು, ಆದಷ್ಟು ಬೇಗ ಕೊಡವ ಜನಾಂಗಕ್ಕೆ ದೊರಕಬೇಕಾದ ಬುಡಕಟ್ಟು ಸ್ಥಾನಮಾನವನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ಮುಖಂಡರುಗಳಿಗೆ ಮನವಿ ಸಲ್ಲಿಸುವ ಸಂದರ್ಭ ಸಿ.ಎನ್.ಸಿ.ಯ ಕಲಿಯಂಡ ಪ್ರಕಾಶ್, ಚಂಬAಡ ಜನತ್, ಕಾಟುಮಣಿಯಂಡ ಉಮೇಶ್, ಬೆಪ್ಪಾಡಿಯಂಡ ಬಿದ್ದಪ್ಪ, ಬೆಪ್ಪಾಡಿಯಂಡ ದಿನು, ಪುಲ್ಲೇರ ಕಾಳಪ್ಪ, ಅರೆಯಡ ಗಿರೀಶ್, ಪೋರಿಮಂಡ ದಿನಮಣಿ, ಚೋಲಪಂಡ ನಾಣಯ್ಯ, ನಂದೇಟಿರ ರವಿ, ಪುದಿಯೊಕ್ಕಡ ಕಾಶಿ, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಪುಟ್ಟಿಚಂಡ ಡಾನ್ ದೇವಯ್ಯ ಹಾಜರಿದ್ದರು.