ನಾಪೋಕ್ಲು, ಅ. ೯ : ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುತ್ತಿದ್ದು ಸ್ಥಳೀಯ ನಾಗರಿಕರೊಂದಿಗೆ ಅಸ್ಸಾಂ ಕಾರ್ಮಿಕರು ಲಸಿಕೆಗಾಗಿ ಸಾಲುಗಟ್ಟಿ ನಿಂತು ಲಸಿಕೆ ಪಡೆದರು. ಈ ವರೆಗೆ ಶಾಲೆಯಲ್ಲಿ ನಾಗರಿಕರಿಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು ಇದನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಈವರೆಗೆ ಪಬ್ಲಿಕ್ ಶಾಲೆಯಲ್ಲಿ ಮೊದಲ ಡೋಸ್ ಅನ್ನು ಸುಮಾರು ೬೭೦೦ ಜನರು ಮತ್ತು ಎರಡನೇ ಡೋಸ್ ಅನ್ನು ಸುಮಾರು ೩೧೫೪ ಜನರು ಲಸಿಕೆ ಪಡೆದುಕೊಂಡಿದ್ದು ಯಾರು ಲಸಿಕೆ ಪಡೆದಿರುವುದಿಲ್ಲವೋ ಅವರು ಮುಂದೆ ಸಮುದಾಯ ಆರೋಗ್ಯ ಕೇಂದ್ರದಿAದ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆಯವರು ಮನವಿ ಮಾಡಿದ್ದಾರೆ.