ಕೂಡಿಗೆ, ಅ. ೮: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿಯ ಜಮಾಬಂದಿ ಕಾರ್ಯಕ್ರಮವು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ೧೪ ನೇ ಹಣಕಾಸು ಯೋಜನೆ ಕಾಮಗಾರಿ ಮತ್ತು ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ನಡೆದ ವಿವಿಧ ಕಾಮಗಾರಿಗಳ ಮಂಡನೆ, ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಮಾಹಿತಿಯನ್ನು ಅಭಿವೃದ್ಧಿ ಅಧಿಕಾರಿ ವೀಣಾ ಸಭೆಗೆ ತಿಳಿಸಿದರು ಗ್ರಾಮಸ್ಥರ ಪರಿಶೀಲನೆ ನಂತರ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಟಿ. ಬೇಬಿ, ಸದಸ್ಯರಾದ ಟಿ.ಸಿ. ಶಿವಕುಮಾರ್, ಸಾವಿತ್ರಿ, ತೀರ್ಥಾನಂದ, ಯಶೋದ, ದೇವರಾಜ್ ಎ,ಆರ್ ಮಹಾದೇವ, ಜಿ.ಟಿ. ಶೋಭಾ, ಅಭಿವೃದ್ಧಿ ಅಧಿಕಾರಿ ವೀಣಾ, ನೋಡಲ್ ಅಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.