ಪೆರಾಜೆ, ಅ. ೮: ಇಲ್ಲಿಯ ಜ್ಯೋತಿ ಪ್ರೌಢಶಾಲೆಯಲ್ಲಿ ಪೋಷಕ ಸಮಿತಿ ಹಾಗೂ ಪೋಷಕ ಸದಸ್ಯರು ಪ್ರೌಢಶಾಲಾ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಈ ಕಾರ್ಯದಲ್ಲಿ ಪೋಷಕ ಸಮಿತಿ ಅಧ್ಯಕ್ಷ ವಿಧಾಕುಮಾರಿ ಬಂಗಾರಕೋಡಿ, ಉಪಾಧ್ಯಕ್ಷೆ ವೀಣಾಕ್ಷಿ ಕೆ.ಎಲ್., ಕಾರ್ಯದರ್ಶಿ ರಾಜಶೇಖರ ನಿಡ್ಯಮಲೆ, ಸಹ ಕಾರ್ಯದರ್ಶಿ ಪುಂಡರೀಕ ಅರಂಬೂರು ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು.

ಶಾಲೆಯ ಹಿತದೃಷ್ಟಿಯಿಂದ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿಸಿದ ಪೋಷಕರಿಗೆ ಶಾಲಾ ಮುಖ್ಯೋಪಾಧ್ಯಾಯ ವೇಣು ಗೋಪಾಲ್ ಕೊಯಿಂಗಾಜೆ ಕೃತಜ್ಞತೆ ಸಲ್ಲಿಸಿದರು, ಈ ಸಂದರ್ಭ ಶಾಲಾ ಸಂಚಾಲಕರಾದ ಹರಿಶ್ಚಂದ್ರ ಮುಡ್ಕಜೆ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.