ಸೋಮವಾರಪೇಟೆ, ಅ. ೯: ವಿಶ್ವ ಓಜೋನ್ ದಿನಾಚರಣೆ ಪ್ರಯುಕ್ತ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಆಯೋಜಿಸಿದ್ದ ಓಜೋನ್ ಕುರಿತ ಪೋಸ್ಟರ್ ತಯಾರಿ ಹಾಗೂ ಸ್ಲೋಗನ್ ಬರವಣಿಗೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು, ಕೇಂದ್ರ ಸಚಿವಾಲಯದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾಲೆಯ ವಿದ್ಯಾರ್ಥಿಗಳಾದ ಪಂಚಮಿ, ಶಿವಾನಿ, ಸಂಜನ, ಸೌಜನ್ಯ, ಮಾನ್ಯ ಅವರುಗಳಿಗೆ ಭಾರತ ಸರ್ಕಾರದ ಪರಿಸರ ಸಚಿವಾಲಯದಿಂದ ಪ್ರಶಸ್ತಿ ಪತ್ರ ನೀಡಿ ಪ್ರಶಂಸಿಸಲಾಗಿದೆ.