ಸೋಮವಾರಪೇಟೆ, ಅ. ೮ ಕೇಂದ್ರ ಸರ್ಕಾರದ ಉಜ್ವಲ ೨ನೇ ಹಂತದ ಯೋಜನೆಯಡಿ ಪಟ್ಟಣ ವ್ಯಾಪ್ತಿಯ ೧೫ ಕುಟುಂಬಗಳಿಗೆ ಮಂಜೂರಾದ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಫಲಾನುಭವಿಗಳಿಗೆ ವಿತರಿಸಿದರು.

ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೌಲಭ್ಯ ವಿತರಿಸಲಾಯಿತು.

ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಶ್ರೀನಿವಾಸ್, ಗಜಾನನ ಗ್ಯಾಸ್ ಏಜೆನ್ಸಿ ಮಾಲೀಕ ಪಿ.ಕೆ. ರವಿ, ಪ್ರಮುಖರಾದ ಹುಲ್ಲೂರಿಕೊಪ್ಪ ಚಂದ್ರು, ಶರತ್, ಕಿಬ್ಬೆಟ್ಟ ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.