ಗೋಣಿಕೊಪ್ಪಲು.ಅ.೯: ಕೊಡಗಿನ ವಿವಿಧ ಭಾಗದ ಕಾಫಿ ತೋಟದಲ್ಲಿ ಕೆಲಸದ ನೆಪದಲ್ಲಿ ನೆಲೆ ಕಂಡುಕೊAಡಿರುವ ಅಸ್ಸಾಮಿಗರು ಹಾಗೂ ಇವರ ಹೆಸರಿನಲ್ಲಿ ಬಾಂಗ್ಲಿಯರು ಉಳಿದುಕೊಂಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ಪ್ರತಿ ಕಾರ್ಮಿಕನ ದಾಖಲೆಗಳನ್ನು ಪರಿಶೀಲಿಸಬೇಕೆಂದು ದಲಿತ ಮುಖಂಡರು ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ, ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ವಿವಿಧ ವಿಷಯಗಳ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ತಿತಿಮತಿ ದಲಿತ ಮುಖಂಡ ಶಿವಣ್ಣ ಜಿಲ್ಲೆಯಲ್ಲಿನ ಕಾಫಿತೋಟದಲ್ಲಿ ಕಡಿಮೆ ಕೂಲಿಗಾಗಿ ಅಸ್ಸಾಮಿಗರು ಸಹಸ್ರ ಸಂಖ್ಯೆಯಲ್ಲಿ ನೆಲೆ ಕಂಡುಕೊAಡಿದ್ದಾರೆ. ಮುಂದೊAದು ದಿನ ಕೊಡಗು ಅಸ್ಸಾಂ ಅಥವಾ ಬಾಂಗ್ಲಿಯರ ಹಾವಳಿಯಿಂದ ಶಾಂತಿ ಕದಡುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಜಿಲ್ಲೆಯಲ್ಲಿರುವ ಮೂಲ ನಿವಾಸಿಗಳಿಗೆ ಇವರಿಂದ ತೊಂದರೆ ಎದುರಾಗಿದೆ. ಹೊರರಾಜ್ಯ, ದೇಶದಿಂದ ಆಗಮಿಸಿರುವ ಇವರಿಗೆ ಕೆಲವು ಗೋಣಿಕೊಪ್ಪಲು.ಅ.೯: ಕೊಡಗಿನ ವಿವಿಧ ಭಾಗದ ಕಾಫಿ ತೋಟದಲ್ಲಿ ಕೆಲಸದ ನೆಪದಲ್ಲಿ ನೆಲೆ ಕಂಡುಕೊAಡಿರುವ ಅಸ್ಸಾಮಿಗರು ಹಾಗೂ ಇವರ ಹೆಸರಿನಲ್ಲಿ ಬಾಂಗ್ಲಿಯರು ಉಳಿದುಕೊಂಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ಪ್ರತಿ ಕಾರ್ಮಿಕನ ದಾಖಲೆಗಳನ್ನು ಪರಿಶೀಲಿಸಬೇಕೆಂದು ದಲಿತ ಮುಖಂಡರು ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ, ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ವಿವಿಧ ವಿಷಯಗಳ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ತಿತಿಮತಿ ದಲಿತ ಮುಖಂಡ ಶಿವಣ್ಣ ಜಿಲ್ಲೆಯಲ್ಲಿನ ಕಾಫಿತೋಟದಲ್ಲಿ ಕಡಿಮೆ ಕೂಲಿಗಾಗಿ ಅಸ್ಸಾಮಿಗರು ಸಹಸ್ರ ಸಂಖ್ಯೆಯಲ್ಲಿ ನೆಲೆ ಕಂಡುಕೊAಡಿದ್ದಾರೆ. ಮುಂದೊAದು ದಿನ ಕೊಡಗು ಅಸ್ಸಾಂ ಅಥವಾ ಬಾಂಗ್ಲಿಯರ ಹಾವಳಿಯಿಂದ ಶಾಂತಿ ಕದಡುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಜಿಲ್ಲೆಯಲ್ಲಿರುವ ಮೂಲ ನಿವಾಸಿಗಳಿಗೆ ಇವರಿಂದ ತೊಂದರೆ ಎದುರಾಗಿದೆ. ಹೊರರಾಜ್ಯ, ದೇಶದಿಂದ ಆಗಮಿಸಿರುವ ಇವರಿಗೆ ಕೆಲವು ಹೆಚ್.ಆರ್.ಪರಶುರಾಮ್ ಮಾತನಾಡಿ, ದೇವರಕಾಡು ಹಾಗೂ ಗೋಮಾಳಗಳಲ್ಲಿ ಅನೇಕ ವರ್ಷಗಳಿಂದ ಬಡಜನರು ವಾಸಿಸುತ್ತಿದ್ದಾರೆ. ಈ ಜಾಗದ ಸಮೀಪವಿರುವ ಕೆಲವರು ಕಿರುಕುಳ ನೀಡುವುದು ಕಂಡು ಬಂದಿದೆ. ಯಾವುದೇ ಕಾರಣಕ್ಕೂ ಇಂತಹವರ ಮೇಲೆ ಕ್ರಮ ಜರುಗಿಸಲು ಪೊಲೀಸರು ಹಿಂದೇಟು ಹಾಕಬಾರದು ಎಂದರು.
ತಿತಿಮತಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಇ.ಶಿವಕುಮಾರ್ ಮಾತನಾಡಿ, ತಿತಿಮತಿಯ ಕೆಲವು ಕಡೆಗಳಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ಗಾಂಜಾವು ಕೂಡ ಸರಬರಾಜಾಗುತ್ತಿದೆ. ಈ ಬಗ್ಗೆ ಪೊಲೀಸರು ದಿಢೀರ್ ದಾಳಿ ನಡೆಸುವ ಮೂಲಕ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಶಿವಕಾಲೋನಿಯ ದೇವಮ್ಮ ಉದ್ಯೋಗ ವಂಚಿತ ಯುವ ಸಮುದಾಯಕ್ಕೆ ಉದ್ಯೋಗ ಅವಕಾಶ ಒದಗಿಸಲು ಪ್ರಯತ್ನ ಮಾಡುವಂತೆ ತಿಳಿಸಿದರು.
ಸಿಪಿಐ ಜಯರಾಮ್, ಪೊಲೀಸ್ ಇಲಾಖೆಯು ಸದಾ ನೊಂದವರ ಪರ ಕೆಲಸ ನಿರ್ವಹಿಸುತ್ತದೆ ಸತ್ಯಕಂಡು ಬಂದಲ್ಲಿ ಪ್ರಕರಣವನ್ನು ಯಾರ ಒತ್ತಡಕ್ಕೂ ಮಣಿಯದೆ ದಾಖಲಿಸಲಾಗುತ್ತದೆ ಎಂದರು.
ಸಭೆಯಲ್ಲಿ ಮುಖಂಡರುಗಳಾದ ಜಿ.ಪಂ. ಮಾಜಿ ಸದಸ್ಯೆ ಪಿ.ಆರ್.ಪಂಕಜ, ಸಿಂಗಿ ಸತೀಶ್, ಕುಮಾರ್ ಮಹದೇವ್, ಉಣ್ಣಿಕೃಷ್ಣ, ಮಹೇಶ್, ಲಕ್ಷಿö್ಮ, ಚೆಲುವ, ಸೇರಿದಂತೆ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ ಸ್ವಾಗತಿಸಿ ವಂದಿಸಿದರು. ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಮಜೀದ್, ಮೂರ್ತಿ, ಮಂಜುನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.