ಶನಿವಾರಸಂತೆ, ಅ. ೮: ಸಮೀಪದ ಕೊಡ್ಲಿಪೇಟೆಯ ಹೇಮಾವತಿ ರೋಟರಿ ಸಂಸ್ಥೆ ವತಿಯಿಂದ ಸ್ಥಳೀಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಶೈಕ್ಷಣಿಕ ಪ್ರಗತಿಯ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪುಸ್ತಕ ವಿತರಿಸಿದ ಸಂಸ್ಥೆ ಅಧ್ಯಕ್ಷ ಡಿ.ವಿ. ದಿನೇಶ್ ಮಾತನಾಡಿ, ವಿದ್ಯಾಸೇತು ಪುಸ್ತಕ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು, ಸತತ ಅಭ್ಯಾಸದಿಂದ ಪ್ರಗತಿ ಸಾಧಿಸಬಹುದು ಎಂದರು. ಸಂಸ್ಥೆ ಕಾರ್ಯದರ್ಶಿ ಯು.ಎಚ್. ಉಮೇಶ್, ನಿರ್ದೇಶಕರಾದ ಪ್ರವೀಣ್, ದಿವಾಕರ್, ಸದಸ್ಯರಾದ ಭಾನುಪ್ರಕಾಶ್, ಲೋಕೇಶ್, ಚಿಕ್ಕವೀರರಾಜು ಹಾಜರಿದ್ದರು.
ನಂತರ ಬೆಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೂ ರೋಟರಿ ಸಂಸ್ಥೆ ವಿದ್ಯಾಸೇತು ಪುಸ್ತಕ ವಿತರಿಸಿತು.