ಮಡಿಕೇರಿ,ಅ.೯; ಮಂಗಳೂರಿನ ಜನತೆ ಬುದ್ಧಿವಂತರೆAಬದು ಎಲ್ಲರಿಗೂ ಗೊತ್ತಿದೆ., ಹಾಗೆಯೇ ಅವರು ಮುಗ್ಧರೆಂಬದೂ ಕೂಡ ತಿಳಿದಿದೆ., ಅವರ ಮುಗ್ಧತೆಯನ್ನ ಚೆನ್ನಾಗಿ ಉಪಯೋಗಿಸಿಕೊಂಡ ದಕ್ಷಿಣ ಕನ್ನಡದ ಅತಿ ಬುದ್ಧಿವಂತ ಪುನಿತ್ ಕುಮಾರ್ ಅಲ್ಲಿಯ ಜನರಿಗೂ ಟೋಪಿ ಹಾಕಿದ್ದಾನೆ. ಸರಕಾರೀ ಕೆಲಸ ಕೊಡಿಸುವ ನೆಪದಲ್ಲಿ ಒಟ್ಟು ರೂ.೮೩ ಲಕ್ಷದಷ್ಟು ಹಣ ಲಪಟಾಯಿಸಿ ಪಂಗನಾಮ ಹಾಕಿದ್ದಾನೆ..!

ಮಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ರಜನಿ ಎಂಬವರನ್ನು ವ್ಯಾವಹಾರಿಕವಾಗಿ ಪರಿಚಯಿಸಿಕೊಂಡ ಪುನಿತ್ ತನಗೆ ಮೇಲ್ಮಟ್ಟದಲ್ಲಿ ಭಾರೀ ಪ್ರಭಾವವಿರುವದಾಗಿ ನಂಬಿಸಿದ್ದಾನೆ. ಆತನ ಮಾತಿಗೆ ಮರುಳಾದ ಮ್ಯಾನೇಜರ್‌ಗೆ ತಮ್ಮ ಪುತ್ರನಿಗೆ ಸರಕಾರಿ ಕೆಲಸ ಕೊಡಿಸುವದಾಗಿ ನಂಬಿಸಿದ್ದಾನೆ. ಈ ಸಂಬAಧ ಆತನ ಕೋರಿಕೆಯಂತೆ ರೂ.೬ಲಕ್ಷ ಹಣ ಕೂಡ ನೀಡಿದ್ದಾರೆ. ಈ ವಿಚಾರ ಇತರರಿಗೆ ತಿಳಿಯುತ್ತಿದ್ದಂತೆ ಅವರುಗಳು ಕೂಡ ತಮ್ಮ ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಿಸುವಂತೆ ಮ್ಯಾನೇಜರ್ ಬಳಿ ದುಂಬಾಲು ಬಿದ್ದಿದ್ದಾರೆ. ಎಲ್ಲರಿಗೂ ಕೆಲಸ ಮಾಡಿಸಿಕೊಡುವದಾಗಿ ಭರವಸೆ ನೀಡಿದ ಪುನಿತ್‌ಗೆ ಆತ ಕೇಳಿದಂತೆ ಮ್ಯಾನೇಜರ್ ಎಲ್ಲರಿಂದ ಹಣ ಸಂಗ್ರಹಿಸಿ ಒಟ್ಟು ರೂ.೪೨ ಲಕ್ಷ ಆತನಿಗೆ ನೀಡಿದ್ದಾರೆ.

೬ ಲಕ್ಷ ವಾಪಸ್..!

ನಂತರದಲ್ಲಿ ಪುನಿತ್ ನೀಡಿದ ನೇಮಕಾತಿ

(ಮೊದಲ ಪುಟದಿಂದ) ಪತ್ರ ನಕಲಿ ಎಂದು ಅರಿವಾದೊಡನೆ ಎಚ್ಚರಗೊಂಡ ಬ್ಯಾಂಕ್ ಮ್ಯಾನೇಜರ್ ಆತನಲ್ಲಿ ತಾವು ನೀಡಿದ ಹಣ ವಾಪಸ್ ಮಾಡುವಂತೆ ಬೆದರಿಸಿದ್ದಾರೆ. ಆದರೆ, ಚಾಣಾಕ್ಷ ವಂಚಕ ಪುನಿತ್ ರೂ.೬ಲಕ್ಷ ಮಾತ್ರ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಮ್ಯಾನೇಜರ್‌ನನ್ನು ನಂಬಿ ಹಣ ನೀಡಿದವರು ತಮ್ಮ ಹಣ ಹಿಂತಿರುಗಿಸುವAತೆ ಪಟ್ಟು ಹಿಡಿಯತೊಡಗಿದಾಗ ತಮ್ಮ ಕೈಯ್ಯಲ್ಲಿದ್ದ ಸ್ವಂತ ಹಣವನ್ನು ನೀಡಿ ತಮ್ಮ ಋಣಭಾರ ಇಳಿಸಿಕೊಂಡಿದ್ದಾರೆ.

ಎಎಸ್‌ಐಗೇ ಮೋಸ..!

ಮತ್ತೊಂದು ಪ್ರಕರಣದಲ್ಲಿ ಕಾನೂನು ರಕ್ಷಣೆ ಮಾಡುವ, ಕಳ್ಳ-ವಂಚಕರನ್ನು ಹಿಡಿದು ಹೆಡೆಮುರಿಕಟ್ಟುವ ಜವಾಬ್ದಾರಿಯಲ್ಲಿರುವ ಪೊಲೀಸ್ ಅಧಿಕಾರಿಗೆ ಈ ವಂಚಕ ನಾಮ ಎಳೆದಿದ್ದಾನೆ. ತನಗೆ ಪರಿಚಯವಾದ ನಿವೃತ್ತ ಸಹಾಯಕ ಠಾಣಾಧಿಕಾರಿಯೋರ್ವರ ಮಗನಿಗೆ ಸರಕಾರೀ ಕೆಲಸ ಕೊಡಿಸುವದಾಗಿ ನಂಬಿಸಿದ್ದಾನೆ. ಮಗನಿಗೆ ಸರಕಾರೀ ಉದ್ಯೊಗ ಸಿಗಲಿದೆ ಎಂಬ ಆಸೆಯಿಂದ ಆ ಅಧಿಕಾರಿ ತಮ್ಮ ದುಡಿಮೆಯ ನಿವೃತ್ತಿಯ ಹಣವನ್ನೆಲ್ಲ ಸೇರಿಸಿ ಒಟ್ಟು ರೂ. ೩೫ ಲಕ್ಷ ಆತನ ಕೈಗೆ ನೀಡಿದ್ದಾರೆ. ಆದರೆ ಈತ ನೀಡುವ ಕೆಲಸ ಹಾಗೂ ಈತನೂ ನಕಲಿ ಎಂದು ಗೊತ್ತಾದಾಗ ಹಣ ವಾಪಸ್ ನೀಡದಿದ್ದಲ್ಲಿ ಪೊಲೀಸ್ ದೂರು ನೀಡುವದಾಗಿ ಎಚ್ಚರಿಸಿದಾಗ ಒಂದೆರಡು ದಿನದಲ್ಲಿ ಬಂದು ‘ಸೆಟಲ್‌ಮೆಂಟ್’ ಮಾಡುತ್ತೇನೆ ಎಂದು ಹೇಳಿ ಹೋದವನು ಮತ್ತೆ ನಾಪತ್ತೆ..! ?ಕುಡೆಕಲ್ ಸಂತೋಷ್