ಗೋಣಿಕೊಪ್ಪ ವರದಿ, ಅ. ೯ : ವಿ. ಬಾಡಗ ಗ್ರಾಮದಲ್ಲಿ ಕಾಡಾನೆ ಉಪಟಳದಿಂದ ಭತ್ತ ಬೆಳೆ ನಾಶವಾಗುತ್ತಿದೆ. ರಾತ್ರಿ ಗದ್ದೆಗೆ ದಾಳಿ ಇಡುವ ಆನೆಗಳು ಬೆಳೆ ತಿಂದು ಮತ್ತೆ ಅರಣ್ಯ ಸೇರಿಕೊಳ್ಳುತ್ತಿವೆ.

ತೀತಿಮಾಡ ಚಿಣ್ಣಪ್ಪ ಅವರಿಗೆ ಸೇರಿದ ಗದ್ದೆಯನ್ನು ಬಹುತೇಕ ತಿಂದು ನಾಶ ಮಾಡಿವೆ. ಬೆಳೆ ಗರ್ಭಾವಸ್ಥೆಯಲ್ಲಿರುವುದ ರಿಂದ ಬೆಳೆ ನಷ್ಟ ಹೆಚ್ಚಾಗುತ್ತಿದೆ ಎಂದು ಅವರು ನೋವು ಹಂಚಿಕೊAಡಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಸುತ್ತಲಿನ ರೈತರಿಗೆ ವನ್ಯಪ್ರಾಣಿಗಳಿಂದ ಸಮಸ್ಯೆ ಹೆಚ್ಚಾಗುತ್ತಿದ್ದು, ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.