ಮಡಿಕೇರಿ, ಅ. ೯: ಕೊಡಗು ಜಿಲ್ಲೆಗೆ ಅಸ್ಸಾಂ ಕಾರ್ಮಿಕರು ಎಂದು ಉಗ್ರಗಾಮಿ ಸಂಘಟನೆಗಳ ಸದಸ್ಯರು ಹಾಗೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ನುಸುಳಿರುವ ಸಾದ್ಯತೆ ಹೆಚ್ಚಾಗಿದ್ದು ಕೂಡಲೇ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಅಸ್ಸಾಂ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿ, ಆಯಾಯ ರಾಜ್ಯದ ಗುಪ್ತಚರ ಇಲಾಖೆಯ ಮೂಲಕ ದಾಖಲೆ ಮರುಪರಿಶೀಲನೆ ಮಾಡಬೇಕಿದೆ ಎಂದು ಕೊಡಗು ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೊಡಗು ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಕೊಡಗಿನಲ್ಲಿ ಕಾರ್ಮಿಕರ ಸಮಸ್ಯೆಗಳಿರುವುದು ನಿಜ, ಈಗಾಗಲೇ ಹೊರ ಜಿಲ್ಲೆಯಲ್ಲಿ ಇವರಿಂದ ಸಮಸ್ಯೆಗಳು ಆಗಿರುವ ಬಗ್ಗೆ ವರದಿಯಾಗಿದ್ದು, ಜಿಲ್ಲೆಯಲ್ಲಿ ಸಮಸ್ಯೆಗಳು ಆಗುವ ಮೊದಲು ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅನಾಹುತ ಕಟ್ಟಿಟ್ಟಿರುವ ಬುತ್ತಿ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಂಡೋಪತAಡವಾಗಿ ಯಾವುದೇ ಮುಂಜಾಗ್ರತೆ ಕ್ರಮವನ್ನು ಪಾಲಿಸದೆ, ದಾಖಲೆಗಳನ್ನು ಪರಿಶೀಲಿಸದೆ ಜಿಲ್ಲೆಯ ಗಡಿಯೊಳಗೆ ಬರುತ್ತಿರುವ ಹೊರರಾಜ್ಯಗಳ ಕಾರ್ಮಿಕರಿಂದ ದೇಶದ ಭದ್ರತೆಗೆ ಮುಂದೆ ತೊಡಕಾಗಬಹುದು ಹಾಗೂ ಜಿಲ್ಲೆಯಲ್ಲಿ ಇದೀಗ ಭಯದ ವಾತಾವರಣ ಕೂಡ ಸೃಷ್ಟಿಯಾಗಿದೆ. ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾ, ರೋಹಿಂಗ್ಯಾ ಸೇರಿದಂತೆ ಪಾಕಿಸ್ತಾನದ ನಂಟಿರುವ ಉಗ್ರಸಂಘಟನೆಗಳ ಪ್ರಮುಖರು ಕೊಡಗಿನ ಕಾಫಿತೋಟಗಳಲ್ಲಿ ಬೀಡುಬಿಟ್ಟಿರುವ ಸಾದ್ಯತೆಗಳನ್ನು ದೂರತಳ್ಳುವಂತಿಲ್ಲ ಎಂದು ಸಂಘಟನೆ ಆರೋಪಿಸಿದೆ.
ಕಮಿಷನ್ ಆಸೆಗಾಗಿ ಮಧ್ಯವರ್ತಿಗಳು ಇವರನ್ನು ತಂದು ಜಿಲ್ಲೆಯ ಕಾಫಿತೋಟಗಳಿಗೆ ಬಿಡುತ್ತಿದ್ದು, ನಂತರ ಯಜ ಮಾನನಿಗೂ ಮಧ್ಯವರ್ತಿಗಳಿಗೂ ಯಾವುದೇ ಸಂಬAಧ ಇರುವುದಿಲ್ಲ. ಮುಂದೊAದು ದಿವಸ ಇವರಿಂದ ಏನಾದರೂ ತೊಂದರೆಯಾದರೆ ಮಾಲಿಕನೇ ನೇರ ಹೊಣೆಗಾರನಾಗುತ್ತಾನೆ ಹಾಗೂ ಅನಾಹುತಕ್ಕೆ ಬಾರಿ ದಂಡ ತೆರಬೇಕಾಗುತ್ತದೆ. ಈಗಾಗಲೇ ಅಸ್ಸಾಂ ಕಾರ್ಮಿಕರು ಎನ್ನಲಾಗುವ ಇವರಿಗೆ ಕೆಲವರು ಇಲ್ಲಿನ ದಾಖಲೆಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ಗುಮಾನಿ ಇದೆ. ಯಾವುದೇ ಕಾರಣಕ್ಕೂ ಇವರಿಗೆ ಸ್ಥಳೀಯ ದಾಖಲೆಗಳನ್ನು ಮಾಡಿಕೊಡ ಬಾರದು, ಮಾಡಿಕೊಡಲು ಮುಂದಾದರೆ ಎಲ್ಲಾ ಸಂಘ ಸಂಸ್ಥೆ ಹಾಗೂ ವಿವಿಧ ಸಮಾಜಗಳನ್ನು ಒಗ್ಗೂಡಿಸಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದೆ.