ಮಡಿಕೇರಿ, ಅ. ೯: ನಗರದ ಮಹದೇವಪೇಟೆ ಎ.ವಿ. ಶಾಲೆ ಬಳಿಯ ಅಬ್ದುಲ್ ಕಲಾಂ ಬಡಾವಣೆ ನಿವಾಸಿಗಳ ಸಭೆ ನಡೆಯಿತು. ಪ್ರಮುಖರಾದ ಎಂ.ಎ. ನಜೀರ್ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಬಡಾವಣೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಇಲ್ಲಿನ ನಿವಾಸಿಗಳ ಹಿತದೃಷ್ಟಿಯಿಂದ ಕಾರ್ಯಕಾರಿ ಸಮಿತಿಯೊಂದನ್ನು ರಚಿಸುವಂತೆ ಪೂರ್ವಭಾವಿಯಾಗಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು. ಸಭೆಯಲ್ಲಿ ಸಾದಿಕ್ ಸಾಧು, ಮನ್ಸೂರ್, ಜಕ್ರಿಯಾ, ಬಿ.ಪಿ. ಗುರುಕಿರಣ್, ನಾಸಿರ್ ಅಹಮ್ಮದ್, ಕೌಸರ್, ಟಿ.ಆರ್. ಜೀವನ್, ಭಾಷಾ ಭಾಗವಹಿಸಿದ್ದರು. ಬೈ.ಶ್ರೀ ಪ್ರಕಾಶ್ ಸ್ವಾಗತಿಸಿ, ಟಿ.ಆರ್. ಜೀವನ್ ವಂದಿಸಿದರು.