ಸೋಮವಾರಪೇಟೆ, ಅ. ೮: ಹಿಂದೂಗಳಿಗೆ ಭಾರತವೇ ಮಾತೃಭೂಮಿ. ಇಲ್ಲಿ ಹಿಂದೂಗಳ ರಕ್ಷಣೆಗೆ ಜಾಗೃತ ಹಿಂದೂ ಸಮಾಜವೇ ಸಿದ್ಧಗೊಳ್ಳಬೇಕಿದೆ. ಆ ಮೂಲಕ ಲವ್‌ಜಿಹಾದ್, ಭಯೋತ್ಪಾದನೆ, ಗೋಹತ್ಯೆ, ಮತಾಂತರದAತಹ ಕೃತ್ಯಗಳನ್ನು ಕಿತ್ತೊಗೆಯಬೇಕಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ ಕರೆ ನೀಡಿದರು.

ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಘಟಕದಿಂದ ಮಾದಾಪುರದಲ್ಲಿ ಆಯೋಜಿಸಿದ್ದ ಬೃಹತ್ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಿಹಾದಿ ಮಾನಸಿಕತೆಯ ಭಯೋತ್ಪಾದಕರು ಹಿಂದೂ ಸಮಾಜದ ಮೇಲೆ ಧಾಳಿ ನಡೆಸಿ, ಹಿಂದೂಗಳನ್ನು ಕೆರಳಿಸುವ ಯತ್ನ ನಡೆಸುತ್ತಿದ್ದು, ಇದಕ್ಕೆ ಕ್ಷಾತ್ರತೇಜದ ಸಮಾಜ ತಕ್ಕ ಉತ್ತರ ನೀಡಬೇಕಿದೆ ಎಂದರು.

ಮಲ್ಲಿಕಾರ್ಜುನ ಕಾಲೋನಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಜಿಹಾದಿ ಮಾನಸಿಕತೆಯ ಗುಂಪು ಕೊಲೆಯತ್ನದೊಂದಿಗೆ ಹಲ್ಲೆ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾದರೂ ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಹಲ್ಲೆಕೋರರು ಪೊಲೀಸರಿಗೂ ಬೆದರಿಕೆ ಹಾಕುವ ಮಟ್ಟಕ್ಕೆ ಬೆಳೆದಿದ್ದು, ಭಯೋತ್ಪಾದನೆಗೆ ಈ ನೆಲದಲ್ಲಿ ಅವಕಾಶ ನೀಡಬಾರದು ಎಂದು ಪ್ರತಿಪಾದಿಸಿದರು.

ಭಯೋತ್ಪಾದಕರು ಹಿಂದೂ ಸಮಾಜದ ಮೇಲೆ ಧಾಳಿ ನಡೆಸಿ, ಹಿಂದೂಗಳನ್ನು ಕೆರಳಿಸುವ ಯತ್ನ ನಡೆಸುತ್ತಿದ್ದು, ಇದಕ್ಕೆ ಕ್ಷಾತ್ರತೇಜದ ಸಮಾಜ ತಕ್ಕ ಉತ್ತರ ನೀಡಬೇಕಿದೆ ಎಂದರು.

ಮಲ್ಲಿಕಾರ್ಜುನ ಕಾಲೋನಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಜಿಹಾದಿ ಮಾನಸಿಕತೆಯ ಗುಂಪು ಕೊಲೆಯತ್ನದೊಂದಿಗೆ ಹಲ್ಲೆ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾದರೂ ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಹಲ್ಲೆಕೋರರು ಪೊಲೀಸರಿಗೂ ಬೆದರಿಕೆ ಹಾಕುವ ಮಟ್ಟಕ್ಕೆ ಬೆಳೆದಿದ್ದು, ಭಯೋತ್ಪಾದನೆಗೆ ಈ ನೆಲದಲ್ಲಿ ಅವಕಾಶ ನೀಡಬಾರದು ಎಂದು ಪ್ರತಿಪಾದಿಸಿದರು.

(ಮೊದಲ ಪುಟದಿಂದ) ಅಶಕ್ತರು, ಅವಿದ್ಯಾವಂತರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡಲಾಗುತ್ತಿದೆ. ಹಿಂದೂ ಕಾರ್ಯಕರ್ತರ ಮೇಲೆ ಧಾಳಿ ನಡೆಸುವ ಮೂಲಕ ಭಯೋತ್ಪಾದನೆ ಉಂಟುಮಾಡಲಾಗುತ್ತಿದೆ ಎಂದು ಆರೋಪಿಸಿದ ರಾಧಾಕೃಷ್ಣ, ಹಿಂದೂ ಸಮಾಜದ ಸಹನೆ ದೌರ್ಬಲ್ಯ ಅಲ್ಲ ಎಂಬುದನ್ನು ಮನದಟ್ಟು ಮಾಡಬೇಕಿದೆ ಎಂದರು.

ಆರ್‌ಎಸ್‌ಎಸ್ ಬಗ್ಗೆ ನಕಲಿ ಜಾತ್ಯತೀತವಾದಿಗಳು ಆರೋಪ ಮಾಡುತ್ತಿದ್ದು, ಆರ್‌ಎಸ್‌ಎಸ್ ತಾಲಿಬಾನ್ ಸಂಸ್ಕೃತಿ ಹೊಂದಿದ್ದರೆ ಇಂದು ವಿರೋಧಿಗಳೇ ಇರುತ್ತಿರಲಿಲ್ಲ. ಯೋಗ್ಯತೆ ಇರುವವರು ಐಪಿಎಸ್,ಐಎಎಸ್ ಅಧಿಕಾರಿಗಳಾಗುತ್ತಿದ್ದಾರೆ. ಆರ್‌ಎಸ್‌ಎಸ್ ಪಾಠ ಕಲಿತವರು ಎಂದಿಗೂ ದೇಶದ್ರೋಹಿಗಳಾಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ಇಂದು ಸಂಘವನ್ನು ಎಲ್ಲರೂ ಒಪ್ಪುತ್ತಿದ್ದಾರೆ ಎಂದು ರಾಧಾಕೃಷ್ಣ ಪ್ರತಿಪಾದಿಸಿದರು.

ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಟಿ. ಉಲ್ಲಾಸ್ ಮಾತನಾಡಿ, ಎನ್‌ಐಎ ವರದಿಯ ಪ್ರಕಾರ ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸಲು ಐಸಿಸ್ ಪ್ರಯತ್ನಿಸುತ್ತಿದ್ದು, ಕೊಡಗಿನ ಅರಣ್ಯ ಪ್ರದೇಶದಲ್ಲಿ ಅಡಗುತಾಣ ನಿರ್ಮಾಣಕ್ಕೆ ಯತ್ನಿಸುತ್ತಿದೆ. ಈ ಹಿಂದೆ ಬಾಂಬ್ ಸ್ಫೋಟದ ಆರೋಪಿ ನಜೀರ್ ಸಹ ಇಲ್ಲೇ ವಾಸವಿದ್ದ. ಹಿಂದೂ ಸಮಾಜದ ಮುಖಂಡರಾದ ಕುಟ್ಟಪ್ಪ, ಪ್ರವೀಣ್ ಪೂಜಾರಿ ಹತ್ಯೆಯನ್ನು ಗಮನಿಸಿದರೆ ಐಸಿಸ್ ಭಯೋತ್ಪಾದನೆಯ ನೆರಳು ಕೊಡಗಿನಲ್ಲೂ ಗೋಚರಿಸುತ್ತಿದೆ ಎಂದರು.

ಬಾAಗ್ಲಾ ನುಸುಳುಕೋರರು ಅಸ್ಸಾಮಿಗರ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಕೊಡಗಿನ ತೋಟಗಳಲ್ಲಿ ನೆಲೆಸಿದ್ದು, ಇದೀಗ ವ್ಯಾಪಾರಕ್ಕೆ ಇಳಿದಿದ್ದಾರೆ. ಇಂತವರ ಅಂಗಡಿಗಳನ್ನು ಪೊಲೀಸರು ಎತ್ತಂಗಡಿ ಮಾಡಿದರೆ ಸ್ಥಳೀಯ ಕೆಲ ಸಂಘಟನೆಗಳು ಮತೀಯ ಕಾರಣಕ್ಕಾಗಿ ಅಸ್ಸಾಮಿ ಹೆಸರಿನ ಬಾಂಗ್ಲಾ ನುಸುಳುಕೋರರಿಗೆ ಬೆಂಬಲ ನೀಡುತ್ತಿವೆ ಎಂದು ಆರೋಪಿಸಿದರು.

ಮಲ್ಲಿಕಾರ್ಜುನ ಕಾಲೋನಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿದರಷ್ಟೇ ಸಾಲದು. ಇವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕು. ಕೊಡಗಿನಲ್ಲಿ ಅಂರ‍್ರಾಷ್ಟಿçÃಯ ಭಯೋತ್ಪಾದಕರ ಜಾಲ ಹರಡಲು ಬಿಡಬಾರದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ಕೊಡಗಿನಲ್ಲಿ ಅವಕಾಶ ನೀಡಬಾರದು. ಜಾತಿ ವೈಷಮ್ಯ ಬಿಟ್ಟು ಹಿಂದೂ ಸಮಾಜ ಒಂದಾಗಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ, ತಾಲೂಕು ಅಧ್ಯಕ್ಷ ಎಂ.ಬಿ. ಉಮೇಶ್ ಅವರುಗಳು ಉಪಸ್ಥಿತರಿದ್ದರು.