ಮಡಿಕೇರಿ, ಅ. ೭: ವೀರಾಜಪೇಟೆಯ ತೆಲುಗರ ಬೀದಿ ಮುಖ್ಯ ರಸ್ತೆಯ ಕರ್ನಾಟಕ ಬ್ಯಾಂಕ್‌ನ ಮುಂಭಾಗದ ರಸ್ತೆಯಲ್ಲಿನ ಚರಂಡಿಯಲ್ಲಿ ಕೊಳಚೆ ನೀರು ತುಂಬಿ ನಿಂತಿದ್ದು, ಡೆಂಗ್ಯೂ ಹರಡಲು ಸೊಳ್ಳೆಗಳಿಗೆ ವಾಸ ಸ್ಥಳವಾಗಿದೆ.
ಪಟ್ಟಣ ಪಂಚಾಯಿತಿಯವರು ಇದರ ಬಗ್ಗೆ ಬೇಗನೆ ಎಚ್ಚೆತ್ತುಕೊಂಡು ಕೊಳಚೆನೀರು ನಿಲ್ಲದಂತೆ ಕ್ರಮ ವಹಿಸುವಂತಾಗಲಿ ಎಂದು ಸಾರ್ವಜನಿಕರು ‘ಶಕ್ತಿ’ಯೊಂದಿಗೆ ದೂರಿದ್ದಾರೆ.