ಸುಂಟಿಕೊಪ್ಪ,ಅ.೭: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವಿವಿಧ ದೇವಾಲಯಗಳಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಇಲ್ಲಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಬೆಳಿಗ್ಗೆ ಮುಖ್ಯ ಅರ್ಚಕ ಮಂಜುನಾಥ ಉಡುಪ ಅವರ ನೇತೃತ್ವದಲ್ಲಿ ವಿವಿಧ ರೀತಿಯ ಹೂವಿನ ಪೂಜೆ, ಕುಂಕುಮಾರ್ಚನೆ, ನೈವೇದ್ಯ ಪೂಜೆಗಳು ನೆರವೇರಿದವು. ಸಂಜೆ ದೇವಿಗೆ ಅರಶಿನ ಅಲಂಕಾರವನ್ನು ಮಾಡುವುದರ ಮೂಲಕ ಮೊದಲ ದಿನ ನವರಾತ್ರಿ ಪೂಜೋತ್ಸವಕ್ಕೆ ಚಾಲನೆ ನೀಡಲಾಯಿತು.
ವೃಕ್ಷೆÆÃದ್ಭವ ಗಣಪತಿ ದೇವಾಲಯ : ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಗೆ ಚಾಲನೆ ನೀಡಲಾಯಿತು. ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಲಕ್ಷಿö್ಮ, ಪಾರ್ವತಿ, ಸರಸ್ವತಿ ದೇವಿಯರಿಗೆ ಬೆಳಗಿನ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನಂತರ ಆರತಿ ಪೂಜೆ, ಕುಂಕುಮಾರ್ಚನೆ ನಡೆಯಿತು.
ಸಂಜೆ ದೇವಿಯರಿಗೆ ಅರಶಿನ ಅಲಂಕಾರ ಪೂಜೆ ನಡೆಯಿತು.
ರಾಮ, ಚಾಮುಂಡೇಶ್ವರಿ ದೇವಸ್ಥಾನ: ಸಮೀಪದ ಕಂಬಿಬಾಣೆ ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ೬೬ನೇ ವರ್ಷದ ನವರಾತ್ರಿ ಉತ್ಸವಕ್ಕೆ ಶ್ರದ್ಧಾಭಕ್ತಿಯಿಂದ ಮೊದಲ ದಿನದ ಪೂಜೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ದೇವಾಲಯದ ಮುಖ್ಯ ಅರ್ಚಕ ಪ್ರಭಾಕರ್ ಕುದ್ದಣ್ಣಾಯ್ಯ ಅವರ ನೇತೃತ್ವದಲ್ಲಿ ಗಣಹೋಮ, ವಾರ್ಷಿಕ ಕಲಶಾಭಿಷೇಕದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಸಂಜೆ ವಿಶೇಷ ಪೂಜಾ ವಿಧಿವಿಧಾನಗಳು ನಡೆದವು.
ನಾಕೂರು ಈಶ್ವರ ದೇವಾಲಯ: ಕೆದಕಲ್ ಭದ್ರಕಾಳಿ ದೇವಸ್ಥಾನ, ಏಳನೇ ಮೈಲು ಮಹಾದೇವ ಈಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ನವರಾತ್ರಿ ಪೂಜೋತ್ಸವದ ವಿಶೇಷ ಪೂಜಾ ವಿಧಿವಿಧಾನಗಳು ನಡೆದವು.