ಸಿದ್ದಾಪುರ, ಅ. ೭: ಸಿಪಿಐ(ಎಂ) ಪಕ್ಷದ ನೆಲ್ಲಿಹುದಿಕೇರಿ ಶಾಖೆಯ ನಾಲ್ಕನೇ ಶಾಖಾ ಸಮ್ಮೇಳನ ನೆಲ್ಲಿಹುದಿಕೇರಿಯಲ್ಲಿ ನಡೆಯಿತು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಐ.ಆರ್. ದುರ್ಗಾ ಪ್ರಸಾದ್ ಅವರು, ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆಯುವ ಮೂಲಕ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಮೂಡಿಸುತ್ತಾ ಸರಕಾರ ತನ್ನ ಅಧಿಕಾರವನ್ನು ಭದ್ರಪಡಿಸಲು ನೋಡುತ್ತಿರುವುದು ದುರದೃಷ್ಟಕರ. ಇಂದು ಪ್ರಜಾಪ್ರಭುತ್ವವು ಅಪಾಯದಲ್ಲಿದ್ದು ಬೆಲೆಯೇರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಮುಖಂಡ ಜಿ. ರಾಮಕೃಷ್ಣ ಅವರು ಮಾತನಾಡಿ, ರೈತ. ಕಾರ್ಮಿಕರ ವಿರೋಧಿ ಮಸೂದೆಗಳನ್ನು ಅಂಗೀಕರಿಸಿ, ಸರಕಾರ ದೇಶದ ಜನರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸಿಪಿಎಂ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಮಹದೇವ್ ನೆಲ್ಲಿಕೆರಿ, ಶಾಖಾ ಕಾರ್ಯದರ್ಶಿ ಪಿ.ಆರ್ ಭರತ್, ಪಕ್ಷದ ಸದಸ್ಯರಾದ ಉದಯ, ಮೋಣಪ್ಪ, ರವಿ, ಚಂದ್ರನ್, ಸುಬ್ರಮಣಿ ಸೇರಿದಂತೆ ಗ್ರಾಮಸ್ಥರು ಸಮ್ಮೇಳನದಲ್ಲಿ ಭಾಗಿಯಾಗಿದ್ದರು