ಮಡಿಕೇರಿ, ಅ. ೮ : ಮೂರ್ನಾಡು, ಹುದಿಕೇರಿ, ಬಿರುನಾಣಿ, ಗುಹ್ಯ, ಬೇತ್ರಿ ಮತ್ತು ಗುಡ್ಡೆಹೊಸೂರು ವಿದ್ಯುತ್ ಮಾರ್ಗಗಳÀಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ. ೧೧ ರಂದು ಬೆಳಿಗ್ಗೆ ೯.೩೦ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಮೂರ್ನಾಡು, ಕಿಗ್ಗಾಲು, ಬೇಗೂರು, ನಡಿಕೇರಿ, ತೆರಾಲು, ಪರಕಟಕೇರಿ, ಬಾಡಗರಕೇರಿ, ಗುಹ್ಯ, ಕಾಕೋಟುಪರಂಬು, ಬೇತ್ರಿ, ಮೈತಾಡಿ, ಗುಡ್ಡೆಹೊಸೂರು, ಬಸವನಹಳ್ಳಿ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.