ಗೋಣಿಕೊಪ್ಪ ವರದಿ, ಅ. ೭: ರಾಷ್ಟಿçÃಯ ಪೋಷಣ್ ಮಾಸ ಅಂಗವಾಗಿ ಗೋಣಿಕೊಪ್ಪ ಪ್ರೌಢಶಾಲೆಯ ಡಾ. ರಾಧಾಕೃಷ್ಣನ್ ವಿಜ್ಞಾನ ಸಂಘದಿAದ ಪೋಷಕಭರಿತ ಆಹಾರ ಪದಾರ್ಥ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ ನಡೆಸಲಾಯಿತು.

ಶಾಲೆಯ ೪೪ ವಿದ್ಯಾರ್ಥಿಗಳು ಪಾಲ್ಗೊಂಡು, ಸೌತೆಕಾಯಿ, ಆಲೂಗಡ್ಡೆ, ಬೀಟ್‌ರೂಟ್, ಬಾಳೆ, ಕ್ಯಾರೆಟ್, ಬೀನ್ಸ್, ಮೂಲಂಗಿ, ಸಿಹಿ ಗುಂಬಳ, ಸೀಬೆ, ಸೇಬು, ಪಪ್ಪಾಯ, ಕಿತ್ತಳೆ, ದಾಳಿಂಬೆ, ನಿಂಬೆ, ಮೊಳಕೆ ಕಾಳು, ಸೊಪ್ಪು, ಕರಿಬೇವು, ಮೆಂತೆ, ದೊಡ್ಡಪತ್ರೆ ಪ್ರದರ್ಶನ ನೀಡಿದರು. ಹಸಿರು ಆಹಾರ ಪದಾರ್ಥದಿಂದ ಆರೋಗ್ಯಕ್ಕೆ ಆಗುವ ಲಾಭದ ಬಗ್ಗೆ ಮಾಹಿತಿ ಹಂಚಿಕೊAಡು. ತರಕಾರಿ, ಹಣ್ಣು ಹೆಚ್ಚು ಬಳಕೆ ಮಾಡಲು ಸಲಹೆ ನೀಡಲಾಯಿತು.

ಮುಖ್ಯ ಶಿಕ್ಷಕ ರತೀಶ್‌ರೈ ಉದ್ಘಾಟಿಸಿದರು. ವಿಜ್ಞಾನ ಸಂಘ ಅಧ್ಯಕ್ಷ ಡಿ. ಕೃಷ್ಣ ಚೈತನ್ಯ ಇದ್ದರು.