ವೀರಾಜಪೇಟೆ, ಅ. ೭: ಪಟ್ಟಣ ಪಂಚಾಯಿತಿ ಅಧೀನದಲ್ಲಿರುವ ಸ್ಥಳಗಳಲ್ಲಿ ಗೂಡು ಅಂಗಡಿಗಳನ್ನು ತೆರವುಗೊಳಿಸುವಂತೆ ಅಂಗಡಿ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದರೂ ಅಂಗಡಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಇಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ. ಚಂದ್ರ ಕುಮಾರ್ ಸಿಬ್ಬಂದಿಗಳೊAದಿಗೆ ನಗರದ ಸರ್ಕಾರಿ ಆಸ್ಪತ್ರೆಗೆ ತೆರಳುವ ರಸ್ತೆಯ ಬದಿಯಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿ ತೆರವು ಮಾಡುವಂತೆ ತಿಳಿಸಿದ್ದಾರೆ. ಸಿದ್ದಪಾಜಿ ಕ್ಯಾಂಟೀನ್ ಮಾಲೀಕ ಶ್ರೀನಿವಾಸ್ ಎಂಬವರು ಅಂಗಡಿ ತೆರವುಗೊಳಿಸಲು ಆಗಮಿಸಿದ್ದ ಮುಖ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ವೀರಾಜಪೇಟೆ ನಗರ ಠಾಣೆಯಲ್ಲಿ ಶ್ರೀನಿವಾಸ್ ಎಂಬವರ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. -ಕೆ.ಕೆ.ಎಸ್