ಜನಪ್ರತಿನಿಧಿಗಳು ನೋಡದವರಿಲ್ಲ. ಆದರು ಸಹ ನೋಡಿಯೂ ನೋಡದ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಇಲ್ಲಿರುವ ಪುಟ್ಟ ಪುಟ್ಟ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಇಲ್ಲವೆ ಇನ್ನಾವುದಾದರು ಮಾದರಿಯಲ್ಲಿ ಶಿಕ್ಷಣ ನೀಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದಲ್ಲಿ ಮಾತ್ರ ಇಲ್ಲಿ ಪ್ರತಿನಿತ್ಯ ಬೆಳಿಗ್ಗೆ ಎದ್ದು ಗುಜರಿ ಆಯುವುದನ್ನು, ಕಸದರಾಶಿ ಕೆದರುವುದನ್ನು ನಿಲ್ಲಿಸುತ್ತಾರೆ. ಈ ಮಕ್ಕಳು ತಮಗಿಂತ ಮೂರುಪಟ್ಟು ತೂಕದ ಚೀಲ ಹೊತ್ತು ನಿತ್ಯ ಬೆಳಿಗ್ಗೆ ಸೂರ್ಯ ಮೂಡುವ ಮುನ್ನ ಸಾಗಿ ಸೂರ್ಯ ಮುಳುಗುವ ವೇಳೆಗಾಗಲೆ ಆಯ್ದ ಗುಜರಿ ಸಾಮಗ್ರಿಗಳನ್ನು ಮಾರಾಟ ಮಾಡಿರುತ್ತಾರೆ.
ಈ ಮಕ್ಕಳಿಗೆ ಶಿಕ್ಷಣ ಎಂಬುವುದು ಮರೀಚಿಕೆಯಾಗಿದೆ. ಇದೀಗ ೬ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭಗೊAಡಿದೆ. ಸಂಬAಧಪಟ್ಟವರು ಇಲ್ಲಿಯ ಮಕ್ಕಳ ಪಟ್ಟಿಯನ್ನು ತಯಾರು ಮಾಡಿ ಈ ಗುಜರಿ ಆಯುವ ಮಕ್ಕಳಿಗೆ ಶಿಕ್ಷಣ ಒದಗಿಸಿ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಮುಂದಾಗಬೇಕಾಗಿದೆ.
ಈ ರೀತಿಯಲ್ಲಿ ದುಡಿಯಲು ಕಾರಣವೇನೆಂದರೆ ಈ ಮಕ್ಕಳ ಮನೆಯಲ್ಲಿ ಬಡತನ ಎಂಬುದು ತಾಂಡವವಾಡುತ್ತಿದೆ. ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಈ ಮಕ್ಕಳ ಮನೆಯವರಿಗೆ ಸಿಗುತ್ತಿಲ್ಲ. ಇವರ ತಾತ ಮುತ್ತಾತರು ಮಾಡಿಕೊಂಡು ಬರುತ್ತಿದ್ದ ಗುಜರಿ ಆಯುವ ವೃತ್ತಿಯನ್ನೆ ಮುಂದುವರಿಸುತ್ತಿದ್ದಾರೆ. ಹೀಗಾದರೆ ಮಾತ್ರ ಈ ಮಕ್ಕಳ ಮನೆಯವರಿಗೆ ಊಟ-ಬಟ್ಟೆ ಸಿಗುವುದು. - ದಿನೇಶ್ ಮಾಲಂಬಿ