ಮಡಿಕೇರಿ, ಅ. ೭: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ೨೦೨೦-೨೧ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ (ಬಿಎ, ಬಿಕಾಂ, ಬಿ.ಲಿಬ್,ಐ.ಎಸ್‌ಸಿ, ಎಂಎ, ಎಂ.ಕಾA, ಎಂ.ಎಸ್ಸಿ, ಎಂಬಿಎ, ಎಂಲಿಬ್ ಐಎಸ್ಸಿ, ಬಿ.ಇಡಿ ಮತ್ತು ೨೦೧೯-೨೦ನೇ ಸಾಲಿನ ದ್ವಿತೀಯ ವರ್ಷದ ಸ್ನಾತಕ (ಬಿಎ, ಬಿ.ಕಾಂ) ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದ ತರಗತಿಗಳು ಆನ್‌ಲೈನ್‌ನ ಮುಖಾಂತರ ತಾ. ೮ ರಿಂದ (ಇಂದಿನಿAದ) ನಡೆಯಲಿದೆ.

ಕೌಶಲ್ಯಾಭಿವೃದ್ಧಿ ತರಬೇತಿಯ ಪಠ್ಯ ವಿಷಯ, ವೇಳಾಪಟ್ಟಿ ಮತ್ತು ತರಗತಿಗಳ ಆನ್‌ಲೈನ್ ವೆಬ್‌ಲಿಂಕ್‌ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಇ-ಡಿಜಿಟಲ್ (ಇ-ಆigiಣಚಿಟ) ಪ್ರಮಾಣ ಪತ್ರವನ್ನು ನೀಡಲಾಗುವುದು. ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಯೋಜನಾಧಿಕಾರಿ ಜಿ.ಎಸ್. ಲೋಕೇಶ ಮೊ. ೯೬೧೧೪೩೪೮೧೦ ಅವರನ್ನು ಸಂಪರ್ಕಿಸಬಹುದು ಎಂದು ಕುಲಸಚಿವರು ತಿಳಿಸಿದ್ದಾರೆ.