ಗೋಣಿಕೊಪ್ಪಲು, ಅ. ೮: ಕೊಡಗಿನ ವಿವಿಧ ಕಾಫಿ ತೋಟದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಸ್ಸಾಮಿನಿಂದ ಆಗಮಿಸಿದ ಸಾವಿರಾರು ಮಂದಿ ಕೂಲಿ ಕಾರ್ಮಿಕರಾಗಿ ತಮ್ಮ ನೆಲೆ ಕಂಡುಕೊAಡಿದ್ದಾರೆ. ಇದೀಗ ಅಸ್ಸಾಮಿಗರ ಸೋಗಿನಲ್ಲಿ ಬಾಂಗ್ಲಾದೇಶದಿAದ ಹಲವಾರು ಮಂದಿ ಜಿಲ್ಲೆಗೆ ಆಗಮಿಸಿದ್ದಾರೆಂದು ಬಿಜೆಪಿ ತಾಲೂಕು ವಕ್ತಾರ ಕುಟ್ಟಂಡ ಅಜಿತ್ ಕರುಂಬಯ್ಯ ಹಾಗೂ ಸಹ ವಕ್ತಾರ ಪುಲಿಯಂಡ ಪೊನ್ನಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಇವರು ಹಲವಾರು ಅಸ್ಸಾಮಿಗರ ದಾಖಲೆಗಳು ನಕಲಿಯಾಗಿವೆ. ಗಡಿ ಭಾಗದಿಂದ ಭಾರತಕ್ಕೆ ಆಗಮಿಸಿ ಮೂಲ ಅಸ್ಸಾಮಿಗರೊಂದಿಗೆ ಸ್ನೇಹ ಬೆಳೆಸಿಕೊಂಡಿರುವ ಬಾಂಗ್ಲಾದೇಶದ ಮೂಲದವರು ಇಲ್ಲಿ ನೆಲೆ ಕಂಡುಕೊAಡಿದ್ದಾರೆ. ಇಂತಹವರ ಮೂಲ ದಾಖಲೆಗಳನ್ನು ಸಂಬAಧಿಸಿದ ಇಲಾಖೆ ಕರಾರುವಕ್ಕಾಗಿ ಪರಿಶೀಲನೆ ನಡೆಸಬೇಕು ಎಂದಿದ್ದಾರೆ.
ಭಾರತ ದೇಶದ ಯಾವುದೇ ಜನರು ಇಲ್ಲಿ ವಾಸ ಮಾಡಬಹುದು. ಆದರೆ ದೇಶದ್ರೋಹ ಕೆಲಸ ಮಾಡುವ ಬಾಂಗ್ಲಿಯರನ್ನು ಜಿಲ್ಲೆಗೆ ಬರಮಾಡಿಕೊಂಡರೆ ಮತ್ತಷ್ಟು ಅನಾಹುತ ಸೃಷ್ಟಿ ಆಗಲಿದೆ. ಈ ವಿಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಬೆಂಬಲಕ್ಕೆ ನಿಂತಿರುವುದು ಸರಿಯಲ್ಲ. ಇಂತಹ ವಿಷಯದಲ್ಲಿ ರಾಜಕೀಯಕ್ಕೆ ಅವಕಾಶ ನೀಡದೆ ದೇಶದ ಭದ್ರತೆಯ ಹಿತದೃಷ್ಟಿಯಿಂದ ಎಚ್ಚರ ವಹಿಸುವುದು ರಾಜಕೀಯ ಪಕ್ಷಗಳ ಜವಾಬ್ದಾರಿಯೂ ಆಗಿದೆ. ಇಂತಹ ವ್ಯವಸ್ಥೆಗಳಿಗೆ ಯಾರೂ ಕೂಡ ಸಹಕಾರ ನೀಡಬಾರದು.
ಹಲವೆಡೆ ಅಸ್ಸಾಮಿಗರ ನೆಪದಲ್ಲಿ ವಾರದ ಸಂತೆ ದಿನದಂದು ಆಗಮಿಸಿ ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಆರಂಭಿಸಿದ್ದಾರೆ. ಗುರುತು ಪರಿಚಯವಿಲ್ಲದ ವ್ಯಕ್ತಿಗಳಿಗೆ ಸಂಬAಧಪಟ್ಟ ಪಂಚಾಯಿತಿಗಳು ಯಾವುದೇ ಕಾರಣಕ್ಕೂ ವ್ಯಾಪಾರಕ್ಕೆ ಅವಕಾಶ ನೀಡಬಾರದು.ಒಂದು ವೇಳೆ ಇದೇ ರೀತಿ ವ್ಯಾಪಾರ ವಹಿವಾಟುಗಳು ಅಸ್ಸಾಮಿಗರ ಸೋಗಿನಲ್ಲಿ ನಡೆಸುವುದು ಕಂಡು ಬಂದರೆ ಇವುಗಳಿಗೆ ಸಹಕಾರ ನೀಡುತ್ತಿರುವ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ತಾಲೂಕು ಬಿಜೆಪಿ ಎಚ್ಚರಿಸಿದೆ. -ಹೆಚ್.ಕೆ. ಜಗದೀಶ್