*ಗೋಣಿಕೊಪ್ಪ, ಅ. ೮: ಕಡ್ಡಾಯವಾಗಿ ಪ್ಲಾಸ್ಟಿಕ್‌ನ್ನು ನಿಷೇಧಿಸಿದಾಗ ಪರಿಸರ ಸಂರಕ್ಷಣೆ ಸಾಧ್ಯವಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಮಾಯಮುಡಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಸಂಕೀರ್ಣ ಘಟಕ ಉದ್ಟಾಟಿಸಿ, ಕಸ ಸಂಗ್ರಹ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರು ತಾವೇ ಜಾಗೃತರಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದರು.
ಇದೇ ಸಂದರ್ಭ ಕಸವಿಂಗಡಣೆಗೆ ಬಕೆಟ್ ಹಾಗೂ ಒಣಕಸ ಸಂಗ್ರಹಕ್ಕೆ ಚೀಲಗಳನ್ನು ವಿತರಿಸಲಾಯಿತು. ತಾಲೂಕು ಕಾರ್ಯನಿರ್ವಹಕಾಧಿಕಾರಿ ಕೊಣಿಯಂಡ ಅಪ್ಪಣ್ಣ, ಗ್ರಾ.ಪಂ. ಅಧ್ಯಕ್ಷೆ ಎಂ.ಪಿ. ಮೀನಾ, ಉಪಾಧ್ಯಕ್ಷ ಸುಮಿತ್ರಾ ರವಿ, ಚೆಪುö್ಪಡೀರ ಪ್ರದೀಪ್, ವಿಠಲ್‌ನಾಚಯ್ಯ, ಸದಸ್ಯರುಗಳಾದ ಆಪಟ್ಟೀರ ಟಾಟು ಮೊಣ್ಣಪ್ಪ, ಟಿ.ಸಿ. ನಾರಾಯಣ, ನಾಜಿûÃರ, ಶಾಂತ, ಸಿದ್ದಪ್ಪ, ಸುಮಿತ್ರಾ ಬಸವಣ್ಣ, ಪಿ.ಡಿ.ಓ ಗಿರೀಶ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.