ಕಣಿವೆ, ಅ. ೮: ದೇಶವಾಸಿಗಳಿಗೆ ಸ್ವಾತಂತ್ರ‍್ಯದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ತಿಳುವಳಿಕೆ ಮೂಡಿಸುವ ಮೂಲಕ ಸರ್ವ ಜನರು ಶಾಂತಿ ನೆಮ್ಮದಿಯಿಂದ ಬದುಕು ವಂತಹ ಸುಂದರ ವಾತಾವರಣವನ್ನು ಒದಗಿಸುವುದು ಸರ್ಕಾರದ ಮೂಲ ಆಶಯವಾಗಬೇಕಿದೆ ಎಂದು ಹಾಸನ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಎ. ಲೋಕೇಶ್‌ಕುಮಾರ್ ಹೇಳಿದರು.
ಕೊಡಗು ಪರಿವರ್ತನಾ ವೇದಿಕೆ ಆಶ್ರಯದಲ್ಲಿ ದೇಶದ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ ಕುರಿತು ಕುಶಾಲ ನಗರದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನವನ್ನು ಪ್ರತಿಯೊಬರೂ ಅರ್ಥೈಸಿಕೊಳ್ಳಬೇಕಿದೆ.
ಸಂವಿಧಾನದ ಆಶಯದಂತೆ ಜೀವಿಸುವ ಮೂಲಕ ನಮಗೆ ದೊರಕಿರುವ ಸ್ವಾತಂತ್ರö್ಯಕ್ಕೆ ಗೌರವ ಸಲ್ಲಿಸುವಂತಾಗಬೇಕಿದೆ. ಪ್ರಸಕ್ತ ರಾಜಕೀಯ ವ್ಯವಸ್ಥೆ ಒಮ್ಮೊಮ್ಮೆ ಸಂವಿಧಾನ, ಕಾನೂನು ಪಾಲನೆ ಯಲ್ಲಿ ಎಡವುತ್ತಿದೆ. ಸರಕಾರದೊಳಗಿನ ಪ್ರತಿನಿಧಿಗಳಿಗೆ ಸಂವಿ ಧಾನದ ಅರಿವಿನ ಕೊರತೆ ಇದಕ್ಕೆ ಕಾರಣವಾಗಿದೆ ಎಂದು ಲೋಕೇಶ್ ಕುಮಾರ್ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕೊಡಗು ಪರಿವರ್ತನಾ ವೇದಿಕೆ ಸಂಯೋಜಕ ವಕೀಲ ಕೆ.ಎಂ.ಕುAಞ ಅಬ್ದುಲ್ಲಾ ಪ್ರಾಸ್ತಾವಿಕ ನುಡಿಗಳಾಡಿ, ಜಿಲ್ಲೆಯಲ್ಲಿ ಸಮಾನ ಮನಸ್ಕರ ಬಳಗ ರಚಿಸಿ ಆ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇಂದಿನ ಯುವ ಪೀಳಿಗೆಗೆ ಸುಂದರ, ನೆಮ್ಮದಿಯ ಸಮಾಜ ಕಟ್ಟುವಲ್ಲಿ ವೇದಿಕೆ ಮುಂದಾಗಲಿದೆ ಎಂದರು. ಹಾಸನ ಪ.ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ ಮಾತನಾಡಿದರು. ಈ ಸಂದರ್ಭ ಅತಿಥಿಗಳಾಗಿ ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ಸ್ಥಾಪಕ ಡಾ. ಶಿವಕುಮಾರ್, ಪ್ರೊ. ಶ್ರೀನಿವಾಸ್, ವಕೀಲೆ ಜಾನಕಿ, ವೇದಿಕೆ ಪ್ರಮುಖರಾದ ಗೌತಮ್ ಶಿವಪ್ಪ, ಭರತ್ ಕುಮಾರ್, ಲಿಂಗರಾಜು ಮತ್ತಿತರರು ಇದ್ದರು.