ಮಡಿಕೇರಿ, ಅ.೮: ತಾನೊಬ್ಬ ಕ್ವಾರೆ ಮಾಲೀಕ., ನನಗೆ ಬೇರೆ ಬೇರೆ ಕಡೆಗಳಲ್ಲಿ ಕ್ವಾರೆಗಳಿವೆ., ನಿಮ್ಮ ಊರಲ್ಲೂ ಕ್ವಾರೆ ಖರೀದಿಸುತ್ತೇನೆ, ಊರಿನ ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗ ಕೊಡಿಸುವದಾಗಿ ನಂಬಿಸಿ ಪುನಿತ್ಕುಮಾರ್ ಬೆಟ್ಟದಪುರ ಗ್ರಾಮದವರಿಂದ ಬಾಚಿದ್ದು ಬರೋಬ್ಬರಿ ೬೦ಲಕ್ಷ ರೂಪಾಯಿ ಹಣ..! ಮಡಿಕೇರಿಯಲ್ಲಿ ಮಾಡಿದಂತೆ ಬೆಟ್ಟದಪುರದ ಅಮಾಯಕ ಯುವಕನ ಪರಿಚಯ ಮಾಡಿಕೊಂಡು ಆತನ ಮೂಲಕ ಒಟ್ಟು ೨೩ ಮಂದಿಯಿAದ ರೂ.೬೦ಲಕ್ಷ ಸಂಗ್ರಹಿಸಿರುವದು ಬೆಳಕಿಗೆ ಬಂದಿದೆ..!
ಜಿಲ್ಲಾಡಳಿತದ ಲಾಂಛನ ಹಾಗೂ ಜಿಲ್ಲಾಧಿಕಾರಿಗಳ ಸಹಿ ನಕಲು ಮಾಡಿ ಗ್ರಾಮ ಲೆಕ್ಕಿಗ ಹುದ್ದೆ ಸೇರಿದಂತೆ ಪೊಲೀಸ್ ಹುದ್ದೆ ಕೊಡಿಸುವದಾಗಿ ನಕಲಿ ನೇಮಕಾತಿ ಪತ್ರ ನೀಡಿ ಉದ್ಯೋಗಾಕಾಂಕ್ಷಿಗಳಿAದ ಹಣ ಲಪಟಾಯಿಸುತ್ತಿದ್ದ ವಂಚಕರ ಜಾಲದ ಪ್ರಮುಖ ರೂವಾರಿಯನ್ನು ಜಿಲ್ಲಾ ಅಪರಾಧ ಪತ್ತೆದಳದವರು ಬಂಧಿಸಿದ್ದಾರೆ. ಇದೀಗ ಆತ ಇನ್ನಷ್ಟು ಈ ರೀತಿಯ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಸಭ್ಯನAತೆ ಪರಿಚಯ..!
ಕಳೆದ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಪುನಿತ್ಕುಮಾರ್ ಕೊಡಗಿನಲ್ಲಿ ಹೋಂ ಸ್ಟೇನಲ್ಲಿದ್ದ ಸಂದರ್ಭ ಕುಶಾಲನಗರಕ್ಕೆ ಭೇಟಿ ನೀಡುತ್ತಿದ್ದಾಗ ಹೊಟೇಲೊಂದರಲ್ಲಿ ಬೆಟ್ಟದಪುರ ನಿವಾಸಿ ವೆಂಕಟೇಶ್ ಎಂಬಾತನನ್ನು ಪರಿಚಯ ಮಾಡಿಕೊಂಡಿದ್ದಾನೆ. ತಾನು ಕ್ವಾರೆ ಮಾಲೀಕನೆಂದು ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದಾನೆ. ಹೀಗೇ ಸ್ನೇಹ ಬೆಳೆಸಿಕೊಂಡವನೊAದಿಗೆ ಒಂದು ದಿನ ತಾನು ಹಣ ತಂದಿಲ್ಲ, ತನಗೆ ಊಟಕ್ಕೆ ಹಣ ನೀಡುವಂತೆ ಕೇಳಿದ್ದಾನೆ. ಕೊಟ್ಟ ಹಣವನ್ನು ಮತ್ತೊಂದು ದಿನ ಹಿಂತಿರುಗಿಸಿದ್ದಾನೆ. ನಂಬಿಕಸ್ತನಾದ ಈತನನ್ನು ಮುಂದೊAದು ದಿನ ವೆಂಕಟೇಶ ತನ್ನ ಮನೆಗೆ ಕರೆದೊಯ್ದು ಊಟ ಹಾಕಿದ್ದಾನೆ. ಅಲ್ಲದೆ, ತನ್ನ ಸಂಸಾರದ ಕಷ್ಟದ ಕತೆಯೆಲ್ಲವನ್ನೂ ಹೇಳಿಕೊಂಡಿದ್ದಾನೆ. ಇದನ್ನೇ ಬಂಡವಾಳವನ್ನಾಗಿಸಿಕೊAಡ ಪುನಿತ್ ಆತನನ್ನು ತನ್ನ ವಂಚನೆಯ ಬಲೆಗೆ ಕೆಡವಿಕೊಂಡಿದ್ದಾನೆ..!
೬೦ ಲಕ್ಷ ಪಂಗನಾಮ..!
ಕೊಪ್ಪ ವಿಭಾಗದಲ್ಲಿ ವಿದ್ಯುತ್ ಇಲಾಖೆಯಲ್ಲಿ ಹಂಗಾಮಿ ನೌಕರನಾಗಿರುವ ವೆಂಕಟೇಶನ ಪತ್ನಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಶುಶ್ರೂಕಿಯಾಗಿ ಕೆಲಸ ಮಾಡುತ್ತಿದ್ದರು. ತಾನೂ ಬಹಳ ಪ್ರಭಾವಿ ಎಂದು ನಂಬಿಸಿದ್ದ ಪುನಿತ್ ವೆಂಕಟೇಶನಿಗೆ
ಖಾಯಂ ಕೆಲಸ
(ಮೊದಲ ಪುಟದಿಂದ) ಕೊಡಿಸುವದಾಗಿ ಹಾಗೂ ಪತ್ನಿಗೆ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುವದಾಗಿ ನಂಬಿಸಿದ್ದಾನೆ. ಅಲ್ಲದೆ, ಪತ್ನಿಗೆ ಕೆಲಸ ಆಗಿರುವದಾಗಿ ನಕಲಿ ನೇಮಕಾತಿ ಪತ್ರ ಬೇರೆ ನೀಡಿದ್ದಾನೆ. ಇದರಿಂದ ಪ್ರಭಾವಿತನಾದ ವೆಂಕಟೇಶ ತನ್ನ ಪತ್ನಿಯ ಕೆಲಸ ಬಿಡಿಸಿ ಮನೆಗೆ ಕರೆತಂದು ಸರಕಾರಿ ಕೆಲಸಕ್ಕಾಗಿ ಕಾಯುತಲಿದ್ದರು.
ಈ ವಿಚಾರ ತಿಳಿಯುತ್ತಿದ್ದಂತೆ ವೆಂಕಟೇಶನ ಸಹೋದರನ ಪುತ್ರಿ, ಮೈಸೂರಿನಲ್ಲಿ ಡಿ.ಫಾರ್ಮಾ ಓದುತ್ತಿದ್ದವಳಿಗೂ ಸರಕಾರಿ ಕೆಲಸ ಕೊಡಿಸುವಂತೆ ದುಂಬಾಲು ಬಿದ್ದು, ಆಕೆಯನ್ನು ಕೂಡ ಓದು ನಿಲ್ಲಿಸಿ ಮನೆಗೆ ಕರೆತಂದಿದ್ದಾರೆ. ಇದು ಊರಿನಲ್ಲೆಲ್ಲ ಹರಡುತ್ತಿದ್ದಂತೆ ಊರಿನವರು ತಮ್ಮ ಮಕ್ಕಳಿಗೂ ಸರಕಾರಿ ಕೆಲಸ ಕೊಡಿಸುವಂತೆ ವೆಂಕಟೇಶನ ಮೂಲಕ ಗೋಗರೆದಿದ್ದಾರೆ. ಕೆಲಸ ಕೊಡಿಸುವದಾಗಿ ಭರವಸೆ ನೀಡಿದ ಪುನಿತ್ ವೆಂಕಟೇಶನ ಮೂಲಕ ಒಟ್ಟು ೨೩ ಮಂದಿಯಿAದ ರೂ.೬೦ ಲಕ್ಷ ಪಡೆದುಕೊಂಡಿದ್ದಾನೆ. ನಂತರದಲ್ಲಿ ಈತ ನಕಲಿ ಎಂದು ಅರಿವಾದ ಬಳಿಕ ಹಣ ವಾಪಸ್ ನೀಡುವಂತೆ ಕೇಳಿದ್ದಕ್ಕೆ ಒಂದೆರಡು ಸಾವಿರ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ..!
ಇತ್ತ ವೆಂಕಟೇಶನನ್ನ ನಂಬಿ ಹಣ ಕೊಟ್ಟ ಊರ ಮಂದಿ ಹಣ ಹಿಂತಿರುಗಿಸುವAತೆ ವೆಂಕಟೇಶನ ಬೆನ್ನು ಹತ್ತಿದ್ದಾರೆ. ವೆಂಕಟೇಶ ಸೇರಿದಂತೆ ಊರ ಜನರು ಸಾಲ ಮಾಡಿ, ಆಭರಣ, ಆಸ್ತಿ ಅಡವಿಟ್ಟು ನೀಡಿದ ಹಣಕ್ಕಾಗಿ ಪರಿತಪಿಸುತ್ತಿದ್ದಾರೆ. ಊರಿನವರು ವೆಂಕಟೇಶನ ಹಿಂದೆ ಬಿದ್ದಿದ್ದು, ಒಂದು ಹಂತದಲ್ಲಿ ವೆಂಕಟೇಶ ಆತ್ಮಹತ್ಯೆಗೂ ಪ್ರಯತ್ನಿಸಿದ ಘಟನೆಯೂ ನಡೆದಿದೆ. ಆತನ ಬೆಂಬಲಕ್ಕೆ ನಿಂತಿರುವ ಸಹೋದರ ಹೇಗಾದರೂ ಹಣ ಹಿಂತಿರುಗಿಸುವ ಬಗ್ಗೆ ಊರಿನವರಿಗೆ ಖಾತ್ರಿ ನೀಡಿದ್ದಾರೆ.
ಕ್ವಾರೆ ಖರೀದಿಗೆ ತಯಾರಿ..!
ತಾನೊಬ್ಬ ಕ್ವಾರೆ ಮಾಲೀಕನೆಂದು ಬಿಂಬಿಸಿಕೊAಡಿರುವ ಪುನಿತ್ ಬೆಟ್ಟದಪುರದಲ್ಲಿರುವ ಕ್ವಾರೆಯನ್ನು ಖರೀದಿಸಲು ತಯಾರಿ ಮಾಡಿಕೊಂಡಿದ್ದ. ರೂ.೧.೫೦ ಕೋಟಿಗೆ ಖರೀದಿಸಲು ಮಾತುಕತೆ ನಡೆಸಿ, ದಾಖಲೆಗಳನ್ನೂ ಸರಿಮಾಡಿಕೊಂಡಿದ್ದ. ಅಲ್ಲದೆ ಕೆಲಸಕ್ಕಾಗಿ ಈತನ ಬಳಿ ಬರುವವರನ್ನು ಕರೆದೊಯ್ದು ಮೈಸೂರು ಬಳಿ ರಾಶಿ ಹಾಕಲಾಗಿರುವ ಕಲ್ಲು, ಜಲ್ಲಿ ಮುಂತಾದವುಗಳನ್ನು ತನ್ನದೇ ಎಂದು ತೋರಿಸಿ ನಂಬಿಸಿದ್ದ. ಅಲ್ಲಿರುವ ಕಾರ್ಮಿಕರನ್ನು ತನ್ನ ಸ್ನೇಹಿತರ ಮೂಲಕ ‘ಪಾಕೆಟ್’ ಮಾಡಿಕೊಂಡು ತಾನು ಅಲ್ಲಿಗೆ ಹೋಗುವಾಗ ‘ಸಲ್ಯೂಟ್’ ಹೊಡೆಸಿಕೊಳ್ಳುತ್ತಿದ್ದ..!
ಅಷ್ಟರಲ್ಲಿ ನಕಲಿ ಎಂದು ಗೊತ್ತಾದ್ದರಿಂದ ಸದ್ಯಕ್ಕೆ ಕ್ವಾರೆ ಬೆಟ್ಟದಪುರದಲ್ಲಿಯೇ ಉಳಿಯುವಂತಾಗಿದೆ..!
? ಕುಡೆಕಲ್ ಸಂತೋಷ್