ಗೋಣಿಕೊಪ್ಪ ವರದಿ, ಅ. ೮: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಪ್ರಯುಕ್ತ ಜಿಲ್ಲಾ ಹಾಗೂ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾ ವತಿಯಿಂದ ಪೊನ್ನಂಪೇಟೆ ಪ್ರಾಥಮಿಕ ಶಾಲಾ ಆವರಣದಲ್ಲಿ ಹಣ್ಣು ಗಿಡ ನೆಡಲಾಯಿತು. ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೆರ ಈಶ್ವರ ತಿಮ್ಮಯ್ಯ, ರಾಜ್ಯ ಕೃಷಿ ಮೋರ್ಚಾ ಸದಸ್ಯೆ ಯಮುನಾ ಚಂಗಪ್ಪ, ಜಿಲ್ಲಾ ಉಪಾಧ್ಯಕ್ಷ ಸಂದೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಬೀರ್ ದಾಸ್, ಕಾರ್ಯದರ್ಶಿ ಕಿರಣ್, ತಾಲೂಕು ಪ್ರಧಾನ ಕಾರ್ಯದರ್ಶಿ ವಿನು, ಕವನ್, ಖಜಾಂಚಿ ನವೀನ್, ಉಪಾಧ್ಯಕ್ಷ ಶರಿನ್, ಅಪ್ಪಿ, ರಾಜೇಶ್, ಅನಿಲ್, ತಾಲೂಕು ಕಾರ್ಯದರ್ಶಿ ಮಂದಣ್ಣ, ಕಾವೇರಪ್ಪ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಮಧುಕುಮಾರ್ ಇದ್ದರು.