(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಅ. ೮: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಗೆ ಹೊಂದಿಕೊAಡAತಿರುವ ಕೀರೆ ಹೊಳೆಯ ಬದಿಯಲ್ಲಿ ದಿನಕ್ಕೊಂದರAತೆ ಅನಧಿಕೃತ ಶೆಡ್‌ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಇದೀಗ ಇದರ ಸಾಲಿಗೆ ಗೋಣಿಕೊಪ್ಪ, ಪೊನ್ನಂಪೇಟೆ ರಸ್ತೆಯ ಬೈಪಾಸ್ ಜಂಕ್ಷನ್ ಬಳಿ ಇರುವ ಕೀರೆ ಹೊಳೆಯ ಬದಿಯಲ್ಲಿ ಶೆಡ್ ನಿರ್ಮಾಣಗೊಂಡಿದೆ. ಕೀರೆ ಹೊಳೆಯ ಬದಿ ಜಾಗವನ್ನು ಹಲವಾರು ವರ್ಷಗಳ ಹಿಂದೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಜಾಗವನ್ನಾಗಿ ಕಾದಿರಿಸಲಾಗಿತ್ತು. ಇದರ ಸಮೀಪದಲ್ಲಿ ಕೆಲವು ಅಡಿಗಳ ಜಾಗ ಖಾಲಿ ಇರುವುದನ್ನು ಮನಗಂಡ ಕೆಲವರು ರಾತ್ರೋರಾತ್ರಿ ಶೆಡ್ ನಿರ್ಮಾಣ ಮಾಡಿದೆ.

ಮುಖ್ಯರಸ್ತೆಯ ಬದಿಯಲ್ಲಿಯೇ ಈ ರೀತಿಯ ಶೆಡ್‌ಗಳು ನಿರ್ಮಾಣವಾಗುತ್ತಿದ್ದರೂ ಈ ಬಗ್ಗೆ ಪರಿಶೀಲಿಸಬೇಕಾದ ಪಂಚಾಯಿತಿಯ ಆಡಳಿತ ಮಂಡಳಿ, ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಆರಂಭದಲ್ಲಿ ಶೆಡ್‌ಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸುವ ಶೇಡ್‌ನ ಮಾಲೀಕರು ನಂತರದ ದಿನಗಳಲ್ಲಿ ಶಾಶ್ವತ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಹೊಸತೇನಲ್ಲ.

ನಗರದ ಸುತ್ತಮುತ್ತಲಿನಲ್ಲಿ ಯಾವುದೇ ಖಾಲಿ ಜಾಗಗಳು ಕಂಡು ಬಂದಲ್ಲಿ ಇವುಗಳನ್ನು ಕೆಲವರು ತಮ್ಮ ವಶಕ್ಕೆ ಪಡೆಯುವ ಮೂಲಕ ತಮಗೆ ಬೇಕಾದ ರೀತಿಯಲ್ಲಿ ಶೆಡ್‌ಗಳನ್ನು ನಿರ್ಮಿಸಿ ಮತ್ತೊಬ್ಬರಿಗೆ ವ್ಯಾಪಾರಕ್ಕಾಗಿ ದಿನ ಬಾಡಿಗೆಯ ಆಧಾರದಲ್ಲಿ ನೀಡುವ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನಿಸಬೇಕಾದ ಗ್ರಾಮ ಪಂಚಾಯಿತಿ ಮೌನಕ್ಕೆ ಜಾರಿರುವುದರಿಂದ ಸಹಜವಾಗಿಯೇ ಪರೋಕ್ಷ ಸಹಕಾರ ಸಿಗುತ್ತಿದೆ ಎಂಬ ಗುಮಾನಿ ಸಾರ್ವಜನಿಕರಲ್ಲಿ ಕೇಳಿ ಬಂದಿದೆ.

ಈಗಾಗಲೇ ಕೀರೆ ಹೊಳೆ ಒತ್ತುವರಿ ಬಗ್ಗೆ ತಾಲೂಕು ತಹಶೀಲ್ದಾರ್, ಸರ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸರ್ವೆ ನಡೆಸಿ ಕೀರೆ ಹೊಳೆ ಒತ್ತುವರಿ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವಿವರ ನೀಡಿದ್ದಾರೆ. ಹಲವು ಕಡೆಗಳಲ್ಲಿ ಹೊಳೆಯ ಎರಡು ಬದಿಯಲ್ಲಿ ಹೆಚ್ಚಿನ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೆಲ ಸಮಯದ ನಂತರ ತಹಶೀಲ್ದಾರ್ ಸಮ್ಮುಖದಲ್ಲಿ ಹೊಳೆ ಒತ್ತುವರಿದಾರರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.