ಮಡಿಕೇರಿ, ಅ. ೬: ಕೊಡಗು ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಭಗವದ್ಗೀತೆ ಶ್ಲೋಕಪಠಣ

೧೧ ರಿಂದ ೧೩ ವರ್ಷದ ಮಕ್ಕಳಿಗೆ ೧೪ನೇ ಅಧ್ಯಾಯದ ಮೊದಲ ೫ ಶ್ಲೋಕಗಳು ಅರ್ಥಸಹಿತ ಪಠಿಸಿ ವೀಡಿಯೋ ಮಾಡಿ ವಾಟ್ಸಾö್ಯಪ್ ಮುಖಾಂತರ ಕಳುಹಿಸಬೇಕು.

ಲಲಿತಾ ಸಹಸ್ರನಾಮ ಪಠಣ

ಮಕ್ಕಳು ಹಾಗೂ ಮಹಿಳೆಯರು ‘ಸಿಂಧೂರರುಣ’ ದಿಂದ ಪಟ್ಟಬಂಧ ವಲಿತ್ರಯದವರೆಗೆ ಪಠಿಸಿ ವಾಟ್ಸಾö್ಯಪ್ ಮುಖಾಂತರ ಕಳುಹಿಸಬೇಕು.

ವೀಡಿಯೋಗಳನ್ನು ೭೧೦೧೯೯೮೩೫೮೯, ೯೪೪೮೩೮೨೬೧೨, ೯೪೪೯೯೩೩೪೯೧ ಹಾಗೂ ೯೪೪೯೯೫೧೯೯೩ ಸಂಖ್ಯೆಗಳಿಗೆ ತಾ.೧೫ರ ರಾತ್ರಿ ೧೨ ಗಂಟೆಯ ಒಳಗಾಗಿ ಕಳುಹಿಸಬೇಕು. ಸ್ಪರ್ಧೆಯ ಹೆಸರು, ಸ್ಪರ್ಧಾರ್ಥಿಗಳ ಹೆಸರು, ತಾಲೂಕು ಹಾಗೂ ವಿಳಾಸ ಕಡ್ಡಾಯವಾಗಿ ತಿಳಿಸಬೇಕು.

ಕ್ರೀಡಾ ಸ್ಪರ್ಧೆಗಳು

ತಾ.೧೦ ರಂದು ಮಧ್ಯಾಹ್ನ ೨ ರಿಂದ ೪ ಗಂಟೆಯವರೆಗೆ ತಾಲೂಕು ಕೇಂದ್ರಗಳಲ್ಲಿ ಚುಕ್ಕಿ ರಂಗೋಲಿ ಹಾಗೂ ಸ್ಥಳದಲ್ಲೇ ಮಂಕುತಿಮ್ಮನ ಕಗ್ಗ ಕಲಿತು ಪಠಿಸುವ ಸ್ಪರ್ಧೆ ಏರ್ಪಡಿಸಲಾಗಿದೆ.

ತಾ.೧೭ ರಂದು ಬೆಳಿಗ್ಗೆ ೧೦ ರಿಂದ ೧೨ ಗಂಟೆಯವರೆಗೆ ತಾಲೂಕು ಕೇಂದ್ರಗಳಲ್ಲಿ ಚನ್ನೆಮಣೆ, ಕವಡೆ, ಚದುರಂಗ ಹಾಗೂ ಹಗ್ಗ ಜಿಗಿತ ಸ್ಪರ್ಧೆಗಳು ನಡೆಯಲಿವೆ. ೫ ತಾಲೂಕುಗಳ ಕೇಂದ್ರಗಳಲ್ಲಿಯೂ ಕ್ರೀಡಾಸ್ಪರ್ಧೆಗಳು ನಡೆಯಲಿವೆ. ಕ್ರೀಡಾ ಪರಿಕರಗಳನ್ನು ಸ್ಪರ್ಧಾರ್ಥಿಗಳೇ ತರಬೇಕು.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಕೇಂದ್ರಗಳಾದ ಕುಶಾಲನಗರ, ಮೊ: ೯೮೮೬೪೪೩೨೧೬, ಪೊನ್ನಂಪೇಟೆ, ಮೊ: ೯೪೪೯೫೪೫೨೧೧, ಸೋಮವಾರಪೇಟೆ, ಮೊ: ೯೯೪೫೩೦೩೪೩೪, ವೀರಾಜಪೇಟೆ, ಮೊ: ೯೭೪೦೬೩೮೦೧೮, ಮಡಿಕೇರಿ, ಮೊ: ೯೪೪೯೯೫೧೯೯೩ ಸಂಪರ್ಕಿ ಸಬಹುದು.

ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ಡಿಸೆಂಬರ್ ೧೯ ರಂದು ಶತಮಾನೋತ್ಸವ ಆಚರಣೆಯ ಸಂದರ್ಭ ನೀಡಲಾಗುವುದು ಎಂದು ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಡಾ.ರಾಜಾರಾಮ್ ತಿಳಿಸಿದ್ದಾರೆ.