ನಾಪೋಕ್ಲು, ಅ. ೭: ಸಮೀಪದ ಕೊಳಕೇರಿ ಗ್ರಾಮದಲ್ಲಿ ಖಾಸಗಿ ಬಸ್ಸಿನಿಂದ ಬಿದ್ದು ಗಾಯಗೊಂಡ ಮಹಿಳೆಯೋರ್ವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಲಿಸುತ್ತಿದ್ದ ಬಸ್ಸಿನಿಂದ ಕೊಳಕೇರಿ ಗ್ರಾಮದ ಐಸಮ್ಮ (೭೫) ಎಂಬ ಮಹಿಳೆ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ತಲೆ ಹಾಗೂ ಶರೀರಕ್ಕೆ ಗಾಯಗಳಾಗಿವೆ. ಈ ಸಂಬAಧ ಚಾಲಕನ ವಿರುದ್ಧ ಕಾನೂನು ಕ್ರಮಕೈ ಗೊಳ್ಳಬೇಕೆಂದು ಕೊಳಕೇರಿ ಗ್ರಾಮದ ಆಶ್ರಫ್ ಎ.ಎ. ಇಲ್ಲಿನ ಪೊಲೀಸ್ ಠಾಣೆಗೆ ಇಂದು ದೂರು ಸಲ್ಲಿಸಿದ್ದÄ, ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ.