ಕೂಡಿಗೆ, ಅ. ೭: ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗೊಂದಿಬಸವನ ಹಳ್ಳಿ ಗ್ರಾಮದಲ್ಲಿ ಪಾಳು ಬಿದ್ದ ಕಲ್ಲು ಕೊರೆಯ ಗುಂಡಿಗೆ ಬಿದ್ದ ಜಾನುವಾರು ವೊಂದನ್ನು ರಕ್ಷಿಸಲಾಗಿದೆ. ಗ್ರಾಮದ ಗಿರೀಶ್ ಭಟ್ ಎಂಬವರ ಹಸು ಕ್ವಾರಿ ಮೇಲ್ಭಾಗದಲ್ಲಿ ಮೇಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ೧೦೦ ಅಡಿ ಎತ್ತರದಿಂದ ಗುಂಡಿಗೆ ಬಿದ್ದು, ನೀರಿಗೆ ಬಿದ್ದಿದೆ. ನೀರಿನಲ್ಲಿ ಮುಳುಗಿ ಮೇಲೇಳ ಲಾಗದೆ ಒದ್ದಾಡುತ್ತಿದ್ದ ಹಸುವನ್ನು ಕಂಡ ಸ್ಥಳೀಯ ಗ್ರಾಮಸ್ಥರು ಪೊಲೀಸ್ ೧೧೨ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ೧೧೨ ಪೊಲೀಸ್ ಸಿಬ್ಬಂದಿ ಹಸುವನ್ನು ಮೇಲೆತ್ತಲು ಶ್ರಮಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಕುಶಾಲನಗರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದ ರಿಂದ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯಿಂದಲೂ ಹಸುವನ್ನು ಮೇಲೆತ್ತಲಾ ಗಲಿಲ್ಲ. ಕೊನೆಗೆ ಮುಳುಗು ತಜ್ಞ ಗೋಪಾಲ್ ಎಂಬವರು ನೀರಿಗೆ ಇಳಿದು ಜಾನುವಾರನ್ನು ನೀರಿನಿಂದ ರಕ್ಷಿಸುವಲ್ಲಿ ಸಫಲರಾದರು.