ಸೋಮವಾರಪೇಟೆ, ಅ. ೬: ಉರಗದ ತಲೆಯನ್ನು ಹೋಲುವ ಪತಂಗವೊAದು ಪಟ್ಟಣದ ತಾಲೂಕು ಕಚೇರಿ ಮುಂಭಾಗದ ನಾಗೇಶ್ ಕ್ಯಾಂಟೀನ್‌ನಲ್ಲಿ ಕಂಡುಬAದು ಸಾರ್ವಜನಿಕರ ಆಶ್ಚರ್ಯಕ್ಕೆ ಕಾರಣವಾಯಿತು. ಚಿಟ್ಟೆಯ ಎರಡು ರೆಕ್ಕೆಗಳ ಮೇಲೆ ನಾಗರ ಹಾವಿನ ತಲೆಯನ್ನು ಹೋಲುವಂತಹ ಆಕಾರ ಹಾಗೂ ಅದಕ್ಕೆ ಹೊಂದಿಕೆಯಾಗುವAತಹ ಬಣ್ಣಗಳಿದ್ದು, ನೋಡುಗರ ಗಮನ ಸೆಳೆಯಿತು.