ಮಡಿಕೇರಿ, ಅ. ೬: ತುಳುನಾಡು ದಕ್ಷಿಣ ಕನ್ನಡ ಜಿಲ್ಲೆ ಮೂಲದ ಪ್ರಮುಖ ಸತ್ಯದೈವಗಳಲ್ಲಿ ಒಂದಾದ ಸ್ವಾಮಿ ಕೊರಗಜ್ಜ ನಂಬಿದವರ ಕೈ ಬಿಡಲಾರ ಎಂಬ ಮಾತಿದೆ. ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ, ಕೋರಿಕೆಗಳನ್ನು ಈಡೇರಿಸುವ ಅಜ್ಜ ಸ್ವರೂಪಿಯಾದ ಈ ದೈವ ತನ್ನನ್ನು ಅವಮಾನಿಸುವವರಿಗೆ ತಕ್ಕ ಶಾಸ್ತಿಯನ್ನು ಮಾಡುತ್ತಾರೆ ಎಂಬದಕ್ಕೆ ಪೂರಕವಾಗಿ ಹಲವಾರು ಘಟನೆಗಳು ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ಕೆಲವೆಡೆ ಸಂಭವಿಸಿವೆ. ಬಿಲ್ಲವರು, ಮೊಗೇರ ಜನಾಂಗದವರು ಹೆಚ್ಚಾಗಿ ಆರಾಧಿಸುವ ಈ ಕೊರಗಜ್ಜನ ಬಗ್ಗೆ ಅನ್ಯ ಜನಾಂಗದವರೂ ಅತೀವ ನಂಬಿಕೆ ಹೊಂದಿದ್ದಾರೆ. ಅಂತಹ ಶಕ್ತಿಶಾಲಿ ದೇವರೆಂದು ಭಕ್ತರಿಂದ ಕರೆಯಲ್ಪಡುವ ಸ್ವಾಮಿ ಕೊರಗಜ್ಜನ ಗುಡಿಯೊಂದು ಸುಂಟಿಕೊಪ್ಪ ಸಮೀಪದ ಮಂಜಿಕೆರೆ ಎಂಬ ಗ್ರಾಮದಲ್ಲಿದ್ದು, ಸದ್ಯದಲ್ಲಿಯೇ ಪುನರ್ ಪ್ರತಿಷ್ಠಾಪನೆಗೊಳ್ಳಲಿದೆ.
ಹಿನ್ನೆಲೆ ಏನು?
ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಮಂಜಿಕೆರೆ ಎಂಬಲ್ಲಿ ಇರುವ ಸರ್ಕಾರಿ ಪ್ರೌಢಶಾಲೆ ಸಮೀಪ ನೆಲೆನಿಂತಿರುವ ಕೊರಗಜ್ಜ ದೈವಕ್ಕೆ ತನ್ನದೇ ಆದ ಹಿನ್ನೆಲೆಯೂ ಇದೆ. ಕಾರ್ಮಿಕರೊಬ್ಬರ ಮನೆಗೆ ಕಲ್ಲಿನ ರೂಪದಲ್ಲಿ ಬಂದು ಸೇರಿದ ಕೊರಗಜ್ಜ ಇಂದಿಗೂ ಅಲ್ಲಿಯೇ ನೆಲೆ ನಿಂತಿದ್ದಾರೆ.
ಬAದದ್ದು ಹೇಗೆ?
ಅಂದಾಜು ಸುಮಾರು ಐವತ್ತು ವರ್ಷಗಳ ಹಿಂದೆ ಕರಿಯ ಎಂಬವರು, ತೋಟವೊಂದರಲ್ಲಿ ಹುಲ್ಲು ಕಟ್ಟುವ ಕೆಲಸವನ್ನು ಮುಗಿಸಿ ತಡರಾತ್ರಿಯಲ್ಲಿ ಮನೆಗೆ ನಡೆದು ಬರುತ್ತಿದ್ದಾಗ ಶಾಲೆ ತೋಟ ಎಂಬಲ್ಲಿ ಕಲ್ಲೊಂದು ಕಾಣಸಿಕ್ಕಿದೆ. ಕರಿಯ ಅವರು ಅದನ್ನು ನೋಡುತ್ತಿದ್ದಂತೆ ‘ಈ ಕಲ್ಲನ್ನು ಕೊಂಡೊಯ್ದು ನಿನ್ನ ಮನೆಯಲ್ಲಿ ಪೂಜಿಸು; ಎಲ್ಲರಿಗೂ ಒಳಿತಾಗುತ್ತದೆ’ ಎಂಬ ನುಡಿಯೊಂದು ಕರಿಯ ಅವರಿಗೆ ಕೇಳಿಸಿತಂತೆ. ಈ ಹಿನ್ನೆಲೆಯಲ್ಲಿ ಆ ಕಲ್ಲನ್ನು ಅಲ್ಲಿಂದ ತೆಗೆದುಕೊಂಡು ಮುಂದೆ ಸಾಗುತ್ತಿದ್ದಂತೆ ನಾಯಿಯೊಂದು ಕರಿಯ ಅವರ ಮುಂದೆಯೇ ನಡೆದು ಬಂದು ಕರಿಯ ಅವರು ಮನೆ ತಲುಪಿದೊಡನೆ ಅಲ್ಲಿಂದ ಕಾಣದಂತೆ ಮಾಯವಾಯಿತಂತೆ. ಇವೆಲ್ಲಾ ಬೆಳವಣಿಗೆಗಳಿಂದ ಆಶ್ಚರ್ಯ ಚಕಿತರಾದ ಕರಿಯ ಹಾಗೂ ಅವರ ಪತ್ನಿ ಕಮಲ ಇವರುಗಳು ಕರಿಯ ಅವರಿಗೆ ನಡುರಾತ್ರಿ ಕೇಳಿಸಿದ ಆ ನುಡಿಯಂತೆ ಆ ಕಲ್ಲನ್ನು ಪೂಜಿಸಲಾರಂಭಿಸುತ್ತಾರೆ.
ನAಬಿಕೆ ನಿಜವಾಯಿತು..!
ತಮಗೆ ದೊರೆತ ಆ ಕಲ್ಲನ್ನು ಕರಿಯ ಅವರು ಅದು ಸ್ವಾಮಿ ಕೊರಗಜ್ಜನೆ ಇರಬಹುದು ಎಂಬ ನಂಬಿಕೆಯೊAದಿಗೆ ನಾಲ್ಕೆöÊದು ದಶಕಗಳ ಕಾಲ ಪೂಜಿಸುತ್ತಾರೆ. ಆದರೆ ಅವರ ನಂಬಿಕೆ ಸುಳ್ಳಾಗುವುದಿಲ್ಲ. ಒಂದೆರಡು ವರ್ಷಗಳ ಹಿಂದೆ ಈ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯವೊಂದನ್ನು ನಡೆಸಿದ ಸಂದರ್ಭ ಕರಿಯ ಅವರಿಂದ ಪೂಜಿಸಲ್ಪಡುತ್ತಿದ್ದುದು ಸ್ವಾಮಿ ಕೊರಗಜ್ಜನೆ ಎಂಬುದು ಖಾತ್ರಿಯಾಯಿತು.
ಮೂರು ವರ್ಷಗಳಿಂದೀಚೆಗೆ ಇಲ್ಲಿ ಅಗೇಲು ಸೇವೆ, ಕೋಲ ಸೇವೆಗಳನ್ನು ಇಲ್ಲಿನ ಭಕ್ತ ಸಮೂಹ ನಡೆಸುತ್ತಿದ್ದು, ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಕೊರಗಜ್ಜನ ದರುಶನಕ್ಕಾಗಿ ಬರುತ್ತಾರೆ. ಇಲ್ಲಿ ಪೂಜೆ ಕೋಲ ಅಗೇಲು ಸೇವೆಗಳು ನಡೆಯುತ್ತವೆ ಯಾದರೂ ಕೊರಗಜ್ಜ ಯಾವುದೇ ನುಡಿ ಕೊಡುವುದಿಲ್ಲ. ಆದರೆ ಶುದ್ಧ ಭಕ್ತಿಗೆ ಒಲಿಯದೆ ಇರುವುದಿಲ್ಲ ಎಂಬುದು ಇಲ್ಲಿನ ನಂಬಿಕೆ.
ಪ್ರಸ್ತುತ ಕೊರಗಜ್ಜ ಕರಿಯ ಅವರ ಮನೆಯ ಬಳಿ ಸಣ್ಣ ಗುಡಿಯೊಂದರಲ್ಲಿ ಆರಾಧಿಸಲ್ಪಡುತ್ತಿದ್ದು, ಇಲ್ಲಿನ ಭಕ್ತರೆ ರಚಿಸಿಕೊಂಡಿರುವ ಕೊರಗಜ್ಜ ಉತ್ಸವ ಸಮಿತಿ ವತಿಯಿಂದ ಸುಮಾರು ೧೩ ಲಕ್ಷ ವೆಚ್ಚದಲ್ಲಿ ಈ ಗುಡಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ಕೆ ತಯಾರಿ ನಡೆಯುತ್ತಿದೆ. ಕಾರ್ಕಳದ ಶಿಲ್ಪಿಗಳು ಕೊರಗಜ್ಜ ಮೂರ್ತಿಯ ಕೆತ್ತನೆ ಕಾರ್ಯ ನೆರವೇರಿಸಲಿದ್ದಾರೆ. ದೇವಾಲಯ ನಿರ್ಮಾಣಕ್ಕಾಗಿ ಸಮಿತಿಯವರು ದಾನಿಗಳ ನೆರವನ್ನೂ ನಿರೀಕ್ಷಿಸುತ್ತಿದ್ದು, ನೆರವು ನೀಡಲಿಚ್ಚಿಸುವವರು ಎನ್. ಮೋಹನ್ ಖಾತೆ ಸಂಖ್ಯೆ ೮೩೧೭೦೧೦೦೦೦೦೬೦೪ ಐಎಫ್ಎಸ್ಸಿ -ಃಂಖBಔಗಿಎಉAಊA ಬ್ಯಾಂಕ್ ಆಫ್ ಬರೋಡಾ ಗದ್ದೆಹಳ್ಳ ಶಾಖೆ ಸುಂಟಿಕೊಪ್ಪ. ಇಲ್ಲಿಗೆ ನೀಡಬಹುದೆಂದು ಸಮಿತಿಯವರು ತಿಳಿಸಿದ್ದಾರೆ.
ಭಾವುಕರಾದ ಕರಿಯ
ಮಂಜಿಕೆರೆಯಲ್ಲಿ ಕೊರಗಜ್ಜ ದೇವರು ನೆಲೆ ನಿಂತಿರುವ ಹಿನ್ನೆಲೆಯ ಕುರಿತು ‘ಶಕ್ತಿ’ಯೊಂದಿಗೆ ವಿವರಿಸಿದ ೭೮ ವರ್ಷ ಪ್ರಾಯದ ಕರಿಯ ಅವರು ಹಲವು ವರ್ಷಗಳ ಕಾಲ ತಾನೇ ಕೊರಗಜ್ಜನಿಗೆ ಪೂಜೆ ಮಾಡುತ್ತಿದ್ದೆ. ಇತ್ತೀಚಿನ ವರ್ಷಗಳಲ್ಲಿ ನನ್ನ ಮೊಮ್ಮಗ ಪೂಜೆ ಮಾಡುತ್ತಿದ್ದಾನೆ. ದೇವಾಲಯ ಪುನರ್ಪ್ರತಿಷ್ಠಾಪನೆಗೆ ಸ್ಥಳೀಯ ಬೆಳೆಗಾರರಾದ ಗಣೇಶ್ಸ್ವಾಮಿ ಅವರು ಒಂದೂವರೆ ಸೆಂಟ್ ಜಾಗವನ್ನು ದೇವಾಲಯ ಸಮಿತಿಯ ಕೋರಿಕೆ ಮೇರೆಗೆ ಉದಾರವಾಗಿ ನೀಡಿದ್ದಾರೆ ಎಂದು ತಿಳಿಸಿದ ಕರಿಯ ಅವರು ಕೊರಗಜ್ಜ ತಮಗೆ ಬೇಕಾದುದನ್ನು ತಾವೇ ಮಾಡಿಸಿಕೊಳ್ಳುತ್ತಾರೆ ಎನ್ನುತ್ತಾ ಭಾವುಕರಾಗುತ್ತಾರೆ.
- ವರದಿ : ಉಜ್ವಲ್ರಂಜಿತ್, ಸಹಕಾರ : ರಾಜುರೈ