ಮಡಿಕೇರಿ, ಅ. ೬ : ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾಅಚ್ಚಯ್ಯ ಅವರು ತಮ್ಮ ಜನ್ಮ ದಿನವನ್ನು ನಗರದ ಬಾಲಕಿಯರ ಬಾಲಮಂದಿರ ಹಾಗೂ ಬಾಲಭವನದಲ್ಲಿ ಆಚರಿಸಿಕೊಂಡರು.
ಫೀ.ಮಾ.ಕಾರ್ಯಪ್ಪ ಕಾಲೇಜು ಬಳಿಯ ಬಾಲಕಿಯರ ಬಾಲ ಮಂದಿರದಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಅವರು ಸಿಹಿ ಹಂಚಿದರು. ಬಾಲಮಂದಿರ ಮತ್ತು ಬಾಲಭವನದ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಬಿ.ವೈ.ರಾಜೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ವೀಣಾಅಚ್ಚಯ್ಯ ಅವರ ಕುಟುಂಬಸ್ಥರು ಹಾಗೂ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ ಈ ಸಂದರ್ಭ ಹಾಜರಿದ್ದರು.