ರಾಜ್ಯಕ್ಕೆ ರಾಷ್ಟçಪತಿ ಕೋವಿಂದ್ ಆಗಮನ
ಬೆಂಗಳೂರು, ಅ. ೬: ರಾಷ್ಟçಪತಿ ರಾಮನಾಥ್ ಕೋವಿಂದ್ ಅವರು ಮೂರು ದಿನಗಳ ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ರಾಷ್ಟçಪತಿ ರಾಮನಾಥ್ ಕೋವಿಂದ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು. ಈ ಸಂದರ್ಭ ಮುಖ್ಯಮಂತ್ರಿಗಳು ರಾಷ್ಟçಪತಿಗಳಿಗೆ ಶಾಲು ಹೊದಿಸಿ ಸರ್ಕಾರದ ಪರವಾಗಿ ಸನ್ಮಾನಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಈ ಸಂದರ್ಭ ಉಪಸ್ಥಿತರಿದ್ದರು. ತಾ. ೭ ರಂದು (ಇಂದು) ರಾಷ್ಟçಪತಿಗಳು ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನಾಥಸ್ವಾಮಿ ದೇಗುಲಕ್ಕೆ ಭೇಟಿ ನೀಡಲಿದ್ದು, ಜಿಲ್ಲೆಯಲ್ಲಿ ೪೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ನಂತರ ಮೈಸೂರು, ಮಂಗಳೂರಿಗೆ ತೆರಳುವ ರಾಷ್ಟçಪತಿಗಳು ತಾ. ೮ ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ, ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ. ಅಂದೇ ಮಂಗಳೂರಿನಿAದ ವಿಶೇಷ ವಿಮಾನದ ಮೂಲಕ ದೆಹಲಿಗೆ ಮರಳಲಿದ್ದಾರೆ.
ರಾಜ್ಯಕ್ಕೆ ೨೭೫ ಪಶು ಚಿಕಿತ್ಸಾ ವಾಹನ ನೀಡಲು ಕೇಂದ್ರ ಒಪ್ಪಿಗೆ
ಬೆಂಗಳೂರು, ಅ. ೬: ಪ್ರಧಾನಿ ನರೇಂದ್ರ ಮೋದಿ ಅವರ ಕೃಪೆಯಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ನಮ್ಮ ಸಂಕಲ್ಪ ಯಶಸ್ವಿಯಾಗುತ್ತಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಹೇಳಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಚಿವರ ಜೊತೆ ಮಾತುಕತೆ ನಡೆಸಿದಾಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಶು ಸಂಜೀವಿನಿ ಯೋಜನೆಯನ್ನು ದೇಶಾದ್ಯಂತ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ. ರಾಷ್ಟಿçÃಯ ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ಘಟಕಗಳಾದ ೧೪ ಟಾಟಾ ವಿಂಗರ್ ರಾಜ್ಯಕ್ಕೆ ಮಂಜೂರಾಗಿವೆ. ನಮ್ಮ ಮಹತ್ವದ ಯೋಜನೆ ಯಶಸ್ವಿಯಾಗಿದೆ ಎಂದಿದ್ದಾರೆ. ರಾಜ್ಯದಲ್ಲಿ ೨೭೫ ಪಶು ಸಂಚಾರಿ ವಾಹನಗಳು ಮಂಜೂರಾಗಿವೆ. ರೂ. ೪೪ ಕೋಟಿ ಅನುದಾನ ಬಿಡುಗಡೆ ಆಗಿದೆ. ಒಂದು ವಾಹನಕ್ಕೆ ರೂ. ೧೬ ಲಕ್ಷ ವೆಚ್ಚವಾಗಲಿದೆ. ವಾಹನ ನಿರ್ವಹಣೆಗೆ ಪಿಪಿಪಿ ಮಾದರಿಯಲ್ಲಿ ಜಾರಿಗೆ ವಾರ್ಷಿಕ ರೂ. ೫೦ ಕೋಟಿ ನಿರ್ವಹಣಾ ವೆಚ್ಚವಾಗುತ್ತದೆ. ಪಶು ಚಿಕಿತ್ಸಾಲಯಕ್ಕೆ ಒಬ್ಬರು ಪಶು ವೈದ್ಯರು, ಒಬ್ಬರು ಸಹಾಯಕರು ಹಾಗೂ ಒಬ್ಬರು ಚಾಲಕರು ಚಾಲಕರು ಇರುತ್ತಾರೆ. ಕರ್ನಾಟಕದಲ್ಲಿ ೧೯೬೨ ನಂಬರ್‌ಗೆ ಕರೆ ಮಾಡಿದರೆ, ಪಶು ಸಂಜೀವಿನಿ ವಾಹನ ರೈತರ ಮನೆಗೆ ತೆರಳಲಿದೆ ಎಂದರು. ಶೀಘ್ರವೇ ಗೋಶಾಲೆ ಆರಂಭಕ್ಕೆ ಭೂಮಿಪೂಜೆ ಮಾಡಲಾಗುವುದು ಎಂದರು. ಗೋಹತ್ಯೆ ಕಾಯ್ದೆ ಜಾರಿಗೆ ಬಂದ ನಂತರ ೪೦೦ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಬಕ್ರೀದ್ ಸಂದರ್ಭದಲ್ಲಿ ೯೦೦೦ ಸಾವಿರ ಪಶುಗಳ ರಕ್ಷಣೆ ಮಾಡಲಾಗಿದೆ. ಕಾಲುಬಾಯಿ ರೋಗಕ್ಕೆ ೫೦ ಲಕ್ಷ ಡೋಸ್ ಲಸಿಕೆ ಬಂದಿದೆ. ಕಾಲುಬಾಯಿ ರೋಗದಿಂದ ೫೮ ಜಾನುವಾರುಗಳು ಸಾವಿಗೀಡಾಗಿವೆ. ೪೪೦೦ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದಿತ್ತು. ತಕ್ಷಣ ಲಸಿಕೆ ಹಾಕಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳ ಮಾರಾಟ ಮಾಡುತ್ತಿದ್ದವರ ಬಂಧನ
ಬೆAಗಳೂರು, ಅ. ೬: ಮಕ್ಕಳಾಗದ ದಂಪತಿಗೆ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಕೊಡಿಸುತ್ತೇವೆ ಎಂದು ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ದೇವಿ ಷಣ್ಮುಗಮ್ಮ, ಮಹೇಶ್, ರಾಜಣ್ಣ, ಜನಾರ್ದನ್, ಧನಲಕ್ಷಿö್ಮÃ ಬಂಧಿತ ಆರೋಪಿಗಳು. ಆರೋಪಿಗಳು ಬಡಕುಟುಂಬದ ಮಕ್ಕಳನ್ನು ಕಡಿಮೆ ಹಣಕ್ಕೆ ಖರೀದಿಸುತ್ತಿದ್ದರು. ಬಳಿಕ ಮಕ್ಕಳಿಲ್ಲದವರಿಗೆ ಬಾಡಿಗೆ ತಾಯಿ ಮೂಲಕ ಮಗುವಾಗಿದೆ ಎಂದು ನಂಬಿಸಿ, ಲಕ್ಷಗಟ್ಟಲೇ ಹಣ ಪಡೆದು ವಂಚಿಸುತ್ತಿದ್ದರು. ಇದೇ ರೀತಿ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಾಲದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ದಾಳಿ ನಡೆಸಿ ೧೩ ಮಕ್ಕಳನ್ನು ರಕ್ಷಿಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಕೋವಿಡ್-೧೯: ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ
ಬೆಂಗಳೂರು, ಅ. ೬: ರಾಜ್ಯದಲ್ಲಿ ಕೊರೊನಾ ಇಳಿಕೆ ಮುಂದುವರೆದಿದೆ. ಕಳೆದ ೨೪ ಗಂಟೆಗಳಲ್ಲಿ ೫೨೩ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ೨೯,೭೯,೩೩೧ ಆಗಿದೆ. ೬೨೧ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ ೨೯,೨೯,೬೨೯ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ ೧೧,೮೧೯ ಸಕ್ರಿಯ ಪ್ರಕರಣಗಳಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಸೋಂಕಿನಿAದ ೯ ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟಾರೇ ಮೃತರ ಸಂಖ್ಯೆ ೩೭,೮೫೪ಕ್ಕೆ ಏರಿಕೆಯಾಗಿದೆ. ಸೋಂಕಿನ ಪ್ರಮಾಣ ಶೇ. ೦.೩೯ ರಷ್ಟಿದ್ದು, ಮರಣ ಪ್ರಮಾಣ ಶೇ. ೧.೭೨ ರಷ್ಟಿದೆ. ಬೆಂಗಳೂರಿನಲ್ಲಿ ೨೦೫ ಹೊಸ ಪ್ರಕರಣ ಪತ್ತೆಯಾಗಿದ್ದು, ೨೩೦ ಸೋಂಕಿತರು ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ, ಹಾವೇರಿ, ಕಲಬುರಗಿ, ವಿಜಯಪುರ ಹಾಗೂ ಯಾದಗರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ. ಬೆಂಗಳೂರು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಎರಡಂಕಿ ದಾಟಿಲ್ಲ.
ವರ್ಷಾಂತ್ಯಕ್ಕೆ ಎಸ್-೪೦೦ ಕ್ಷಿಪಣಿ ವ್ಯವಸ್ಥೆ ಸೇರ್ಪಡೆ
ನವದೆಹಲಿ, ಅ. ೬: ರಷ್ಯಾದ ಅತ್ಯಾಧುನಿಕ ಶಸ್ತಾçಸ್ತç ವ್ಯವಸ್ಥೆಗಳಲ್ಲಿ ಒಂದಾದ ಎಸ್-೪೦೦ ಕ್ಷಿಪಣಿ ವ್ಯವಸ್ಥೆಯನ್ನು ಈ ವರ್ಷದ ಅಂತ್ಯದ ವೇಳೆಗೆ ವಾಯುಪಡೆಗೆ ಸೇರಿಸಲಾಗುವುದು ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಹೇಳಿದ್ದಾರೆ. ತನ್ನ ಸಂಪೂರ್ಣ ಕಾರ್ಯಕ್ಷಮತೆಗಾಗಿ ಮೂರು ವಿಭಿನ್ನ ಕ್ಷಿಪಣಿಗಳನ್ನು ಬಳಸುವ ಎಸ್-೪೦೦ ವಿಮಾನ-ನಿರೋಧಕ ಶಸ್ತಾçಸ್ತç ವ್ಯವಸ್ಥೆಯ ಅಳವಡಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರ್ಷದ ಅಂತ್ಯದ ವೇಳೆಗೆ ಅದನ್ನು ಸೇನೆಯಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು. ಎಸ್-೪೦೦ ವಿತರಣೆಯು ಹಾದಿಯಲ್ಲಿದೆ. ಮೊದಲ ರೆಜಿಮೆಂಟ್‌ಅನ್ನು ಈ ವರ್ಷದೊಳಗೆ ಸೇರಿಸಿಕೊಳ್ಳಬೇಕು ಎಂದು ಏರ್ ಚೀಫ್ ಮಾರ್ಷಲ್ ಚೌಧರಿ ಹೇಳಿದರು. ತನ್ನ ಸಂಪೂರ್ಣ ಕಾರ್ಯ ಕ್ಷಮತೆಯ ಹೊದಿಕೆಯನ್ನು ಮುಚ್ಚಲು ಮೂರು ವಿಭಿನ್ನ ಕ್ಷಿಪಣಿಗಳನ್ನು ಬಳಸುವ ಎಸ್-೪೦೦ ವಿಮಾನ ವಿರೋಧಿ ಶಸ್ತಾçಸ್ತç ವ್ಯವಸ್ಥೆಯ ಅಳವಡಿ ಕೆಯ ಬಗ್ಗೆ ಕೇಳಿದಾಗ, ಐಎಎಫ್ ಮುಖ್ಯಸ್ಥರು ಈ ವರ್ಷದ ಅಂತ್ಯದ ವೇಳೆಗೆ ಅದನ್ನು ಸೇನೆಯಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಏರ್ ಚೀಫ್ ಮಾರ್ಷಲ್ ಚೌಧರಿ ಅವರು, ಎಸ್-೪೦೦ ವಿತರಣೆಯು ಹಾದಿಯಲ್ಲಿದೆ. ಕ್ಷಿಪಣಿ ವ್ಯವಸ್ಥೆಯು ಒಳಬರುವ ಪ್ರತಿಕೂಲ ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಸಹ ೪೦೦ ಕಿ.ಮೀ. ದೂರದಲ್ಲಿ ಮತ್ತು ೩೦ ಕಿ.ಮೀ. ಎತ್ತರದಲ್ಲೇ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.
ಚಿತ್ರಕಲಾ ಪರಿಷತ್ತಿನಲ್ಲಿ ದಸರಾ ಹಬ್ಬದ ವಸ್ತುಪ್ರದರ್ಶನ
ಬೆಂಗಳೂರು, ಅ. ೬: ನಾಡ ಹಬ್ಬ ದಸರಾ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ತಾ. ೮ ರಿಂದ ೧೦ ದಿನಗಳ ಕಾಲ ವಿಶೇಷ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಚಿತ್ತಾರ ಹಾಗೂ ಗ್ರಾಂಡ್ ಫ್ಲಿಯಾ ಮಾರ್ಕೆಟ್ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಮಾರಾಟ ಮೇಳದಲ್ಲಿ ದಸರಾ ಅಲಂಕಾರಕ್ಕೆ ಬೇಕಾಗಿರುವ ವಿಶೇಷ ಗೊಂಬೆಗಳು ಹಾಗೂ ಇನ್ನಿತರ ವಸ್ತುಗಳ ಒಂದೇ ವೇದಿಕೆಯ ಅಡಿಯಲ್ಲಿ ದೊರೆಯಲಿವೆ. ಪ್ರತಿ ದಸರಾ ಸಂದರ್ಭದಲ್ಲೂ ತಮ್ಮ ಬೊಂಬೆಗಳ ಸಂಗ್ರಹದಲ್ಲಿ ಹೊಸತನ ಕಾಪಾಡುವ ನಿಟ್ಟಿನಲ್ಲಿ ಗ್ರಾಹಕರು ಕೆಲವೊಂದು ಗೊಂಬೆಗಳನ್ನು ಖರೀದಿಸುವುದು ನಡೆದು ಬಂದಿರುವ ಸಂಪ್ರದಾಯ. ಇಂತಹ ಸಂಪ್ರದಾಯಕ್ಕೆ ಪುಷ್ಟಿ ಕೊಡುವ ನಿಟ್ಟಿನಲ್ಲಿ ಹಾಗೂ ದಸರಾ ಹಬ್ಬಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಿಗುವ ರೀತಿಯಲ್ಲಿ ಮಾಡುವ ದೃಷ್ಟಿಯಿಂದ ತಾ. ೮ ರಿಂದ ೧೭ ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇಂಡಿಯನ್ ಆರ್ಟಿಸನ್ಸ್ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.