ಮಡಿಕೇರಿ, ಅ. ೬: ಮಡಿಕೇರಿ ದಸರಾ ವಿಜಯದಶಮಿ ಅಂಗವಾಗಿ ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿ ವತಿಯಿಂದ ತಾ. ೭ ರಂದು (ಇಂದು) ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ೧೨ ಕಾಯಿ ಗಣಪತಿ ಹೋಮ ಏರ್ಪಡಿಸಲಾಗಿದೆ. ಬೆಳಿಗ್ಗೆ ೮ ಗಂಟೆಗೆ ಹೋಮ ಆರಂಭಗೊಳ್ಳಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.