ಸೋಮವಾರಪೇಟೆ, ಅ. ೬: ಇಲ್ಲಿನ ಶ್ರೀ ಬಸವೇಶ್ವರ ದೇವಾಲಯ, ವೀರಶೈವ ಸಮಾಜ, ಅಕ್ಕನ ಬಳಗ, ಬಸವೇಶ್ವರ ಯುವಕ ಸಂಘ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಗಳ ಆಶ್ರಯದಲ್ಲಿ ತಾ. ೭ರಿಂದ (ಇಂದಿನಿAದ) ತಾ.೧೫ರವರೆಗೆ ಬಸವೇಶ್ವರ ದೇವಾಲಯದಲ್ಲಿ ಶ್ರೀಶರನ್ನವರಾತ್ರಿ ಉತ್ಸವ ನಡೆಸಲಾಗುವುದು ಎಂದು ವೀರಶೈವ ಸಮಾಜದ ಯಜಮಾನರಾದ ಬಿ.ಪಿ. ಶಿವಕುಮಾರ್ ತಿಳಿಸಿದ್ದಾರೆ.

ತಾ. ೭ರಂದು ಬೆಳಿಗ್ಗೆ ೮ಕ್ಕೆ ಆನೆಕೆರೆಯಿಂದ ಗಂಗೆ ಪೂಜೆ ಯೊಂದಿಗೆ ಶ್ರೀ ದುರ್ಗಾದೇವಿಯ ಉತ್ಸವ ಮೂರ್ತಿಯನ್ನು ಬಸವೇಶ್ವರ ದೇವಾಲಯಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಗುವುದು. ಸಂಜೆ ೬ಕ್ಕೆ ದೇವಿಗೆ ಹೂವಿನ ಅಲಂಕಾರ ಮಾಡಲಾಗು ವುದು. ನಂತರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಲಿದೆ.

ತಾ ೮ರಂದು ವಿಳ್ಯದೆಲೆ ಅಲಂಕಾರ, ೯ರಂದು ಗೆಜ್ಜೆವಸ್ತç ಅಲಂಕಾರ, ೧೦ರಂದು ಬಳೆಗಳ ಅಲಂಕಾರ, ೧೧ರಂದು ಹಣ್ಣಿನ ಅಲಂಕಾರ, ೧೨ರಂದು ನವಿಲುಗರಿ ಮತ್ತು ಸರಸ್ವತಿ ಅಲಂಕಾರ ಮಾಡಲಾಗುವುದು. ಬೆಳಿಗ್ಗೆ ೯ ಗಂಟೆಗೆ ಸರಸ್ವತಿ ಪೂಜೆ ನಡೆಯಲಿದ್ದು, ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುವುದು. ತಾ.೧೩ರಂದು ನಿಂಬೆಹಣ್ಣು ಹಾಗೂ ಬೇವಿನ ಸೊಪ್ಪಿನ ಅಲಂಕಾರ, ೧೪ರಂದು ತರಕಾರಿ ಅಲಂಕಾರ ಮತ್ತು ಆಯುಧಗಳ ಪೂಜೆ ನಡೆಸಲಾಗುವುದು.

ತಾ. ೧೫ರಂದು ಸಂಜೆ ೬ ಗಂಟೆಯಿAದ ನವದುರ್ಗೆಯ ನವಮಿ ಪ್ರಯುಕ್ತ ರಾಜರಾಜೇಶ್ವರಿ ಅಲಂಕಾರ, ಶ್ರೀ ದೇವಿ ಮಹಾತ್ಮೆ ಪಾರಾಯಣ ಹಾಗೂ ಬನ್ನಿ ಮುಡಿದು ವಿಜಯ ದಶಮಿ ಆಚರಣೆ ನಂತರ ಶ್ರೀ ಆದಿಶಕ್ತಿ ಅಮ್ಮನವರಿಗೆ ಉಯ್ಯಾಲೋತ್ಸವ, ಕುಂಕುಮಾರ್ಚನೆ, ಮಹಾಮಂಗ ಳಾರತಿ ನಂತರ ಪ್ರಸಾದ ವಿನಿಯೋಗ ನಡೆಸಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ.