ವೀರಾಜಪೇಟೆ, ಅ. ೪: ಕುಟುಂಬದಲ್ಲಿ ಕಲಹ ನಡೆದು ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ ಪರಿಣಾಮ ನೆಲ್ಲಮ್ಕಕಡ ದಿನು ಎಂಬವರು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನೆಲ್ಲಮಕ್ಕಡ ವಿಜು ಬಂಧಿತ ಆರೋಪಿಯಾಗಿದ್ದಾರೆ.
ಭಾನುವಾರ ಕುಟುಂಬದಲ್ಲಿ ಸಂಘ ಸ್ಥಾಪನೆ ವಿಚಾರದಲ್ಲಿ ನೆಲ್ಲಮಕ್ಕಡ ವಿಜು ಹಾಗೂ ದಿನು ನಡುವೆ ಕಲಹ ಏರ್ಪಟ್ಟಿದೆ. ಕುಟುಂಬ ಸದಸ್ಯರು ಜಗಳ ಬಿಡಿಸಲು ಪ್ರಯತ್ನಿಸಿದರೂ ಯಾವುದೇ ಫಲ ಕಂಡಿಲ್ಲ. ಕುಪಿತಗೊಂಡ ವಿಜು ದಿನುವಿನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಪರಿಣಾಮ ದಿನು ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಕಾಯ್ದೆ ೩೦೭ ಸೆಕ್ಷನ್ ಹಾಕಲಾಗಿದೆ.