ಮಡಿಕೇರಿ, ಅ. ೪: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಸಕ್ತ ಸಾಲಿನ ವಾರ್ಡ್ ಸಭೆಗಳು ತಾ. ೭ ಹಾಗೂ ೮ ರಂದು ನಡೆಯಲಿದೆ. ತಾ. ೭ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಪಂಚಾಯಿತಿ ಸದಸ್ಯ ಮೋಹನ್ ಅಧ್ಯಕ್ಷತೆಯಲ್ಲಿ, ಮಧ್ಯಾಹ್ನ ೨ ಗಂಟೆಗೆ ಕುಂಜಿಲಗೇರಿ ಗ್ರಾಮದ ವಾರ್ಡ್ ಸಭೆಯನ್ನು ಮಹಿಳಾ ಸಮಾಜ ಕಟ್ಟಡದಲ್ಲಿ ಭಟ್ಟಕಾಳಂಡ ಕಾಮವ್ವ ಅಧ್ಯಕ್ಷತೆಯಲ್ಲಿ ಹಾಗೂ ತಾ. ೮ ರಂದು ಬೆಳಿಗ್ಗೆ ೧೧ ಗಂಟೆಗೆ ಕಡಂಗಮೂರೂರು ಗ್ರಾಮದ ವಾರ್ಡ್ ಸಭೆಯನ್ನು ಲಕ್ಷಿö್ಮದೇವಿ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜ ಸಭಾಂಗಣದಲ್ಲಿ ಹಾಗೂ ಮಧ್ಯಾಹ್ನ ೨ ಗಂಟೆಗೆ ಬೆಳ್ಳುಮಾಡು ಗ್ರಾಮದ ವಾರ್ಡ್ ಸಭೆಯನ್ನು ಉಪಾಧ್ಯಕ್ಷೆ ರೇವತಿ ಹರೀಶ್ ಅಧ್ಯಕ್ಷತೆಯಲ್ಲಿ ದವಸ ಭಂಡಾರ ಕಟ್ಟಡದಲ್ಲಿ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.