ಮಡಿಕೇರಿ, ಅ.೪ : ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಕೋವಿಡ್ ಮಾರ್ಗಸೂಚಿಯನ್ವಯ ಮಡಿಕೇರಿ ನಗರದ ಅರಣ್ಯ ಭವನದಿಂದ ೪.೫ ಕಿ.ಮೀ.ದೂರದ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ತನಕ ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಕಾಲ್ನಡಿಗೆ ಜಾಥಾ (ವಾಕಥಾನ್)ವನ್ನು ಏರ್ಪಡಿ ಸಲಾಗಿತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಪೊನ್ನಂಪೇಟೆ ಅರಣ್ಯ ಕಾಲೇಜು, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಗ್ರೀನ್ ಸಿಟಿ ಫೋರಂ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗ ದೊಂದಿಗೆ ಏರ್ಪಡಿಸಿದ್ದ ಜನಜಾಗೃತಿ ಜಾಥಾದಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು.

ವಾಕಥಾನ್ ಓಟಕ್ಕೆ ಹಸಿರು ನಿಶಾನೆ ನೀಡಿ ಮಾತನಾಡಿದ ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿ ಕಾರಿ ತಖತ್ ಸಿಂಗ್ ರಣಾವತ್, ವನ್ಯಜೀವಿಗಳ ರಕ್ಷಣೆ, ಕಾಳಜಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವನ್ಯಜೀವಿ ಸಪ್ತಾಹವನ್ನು ಆಯೋಜಿ ಸಲಾಗುತ್ತಿದೆ. ಪ್ರತಿಯೊಬ್ಬರೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದರು.

ವನ್ಯಜೀವಿ ಸಪ್ತಾಹದ ಅಗತ್ಯದ ಬಗ್ಗೆ ವಿವರಿಸಿದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ ಸಿ.ಜಿ. ಕುಶಾಲಪ್ಪ, ವನ್ಯಜೀವಿಗಳ ಸುಸ್ಥಿತಿಯೊಂದಿಗೆ ಪರಿಸರ ಸಂರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು ಎಂದರು. ಅರಣ್ಯ ಮತ್ತು ವನ್ಯಜೀವಿಗಳು ಪರಿಸರ ಸಮತೋಲನ ಕಾಪಾಡಲು ಪೂರಕವಾಗಿವೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ( ವನ್ಯಜೀವಿ ವಿಭಾಗ) ಎಂ.ಶಿವರಾಮ್ ಬಾಬು ಪ್ರತಿಯೊಬ್ಬರೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು.

ವನ್ಯಜೀವಿಗಳ ಸಂರಕ್ಷಣೆ ಕುರಿತು ಜಿಲ್ಲಾ ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮಕುಮಾರ್, ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿ.ಪಂ. ಸಿಇಓ ಭನ್ವÀರ್ ಸಿಂಗ್ ಮೀನಾ, ಡಿಸಿಎಫ್‌ಗಳಾದ ಎ.ಟಿ. ಪೂವಯ್ಯ, ಪಿ.ಎ. ಸೀಮ, ಎಸಿಎಫ್ ಗಳಾದ ಡಿ.ಎಸ್.ದಯಾನಂದ, ಕೆ.ಎ.ನೆಹರು, ಶ್ರೀನಿವಾಸ್ ನಾಯ್ಕ್, ವನ್ಯಜೀವಿ ವಿಭಾಗದ ಆರ್.ಎಫ್. ಎಫ್.ಗಳಾದ ವಿಮಲ್ ಬಾಬು, ಮರಿಸ್ವಾಮಿ, ವೀರೇಂದ್ರ, ದೇಚಮ್ಮ, ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ, ಪದಾಧಿಕಾರಿ ಬಿ.ಬಿ.ಜಾಜಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ.ವೆಂಕಟೇಶ್,

ಗ್ರೀನ್ ಸಿಟಿ ಫೋರಂನ ಪ್ರಮುಖ ಚೆಯ್ಯಂಡ ಸತ್ಯ, ಶಿಕ್ಷಣ ಸಂಯೋಜಕ ಕೆ.ಯು. ರಂಜಿತ್, ಎಂ.ಎಸ್. ಕೇಶವಮೂರ್ತಿ, ಎಸ್.ಆರ್. ಶಿವಲಿಂಗ, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು.

ಕಾಲ್ನಡಿಗೆ ಜಾಥಾ: ಅರಣ್ಯ ಭವನದಿಂದ ಆರಂಭವಾದ ನಡಿಗೆಯು ನಗರದ ಮುಖ್ಯರಸ್ತೆ,ಮಹದೇವಪೇಟೆ, ಎ.ವಿ.ಶಾಲೆಯ ಮೂಲಕ ತೆರಳಿ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ನಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ೧೬೦ ಕ್ಕೂ ಮಂದಿ ಭಾಗವಹಿಸಿದ್ದರು.