ಶನಿವಾರಸಂತೆ, ಅ. ೪: ಶನಿವಾರಸಂತೆ ಕೊಡ್ಲಿಪೇಟೆ ಹೋಬಳಿ ಹಾಗೂ ಗಡಿ ಭಾಗದ ವಿವಿಧ ಅಪರಾಧ ಪ್ರಕರಣಗಳಡಿ ನ್ಯಾಯಾಲಯದಿಂದ ವಾರೆಂಟ್ ಆಗಿದ್ದರೂ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ ೨೪ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷ ಕಾರ್ಯಾಚರಣೆ ಮಾಡಿ ಬೆಳಿಗ್ಗೆ ೫ ಗಂಟೆಯಿAದ ಠಾಣಾ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಅವರ ನೇತೃತ್ವದಲ್ಲಿ ಠಾಣೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಿಗ್ಗೆ ಆರೋಪಿಗಳು ಎದ್ದೇಳುವ ಮೊದಲೇ ಅವರ ಮನೆಗಳಿಗೆ ತೆರಳಿ ೨೪ ಮಂದಿಯನ್ನು ಬಂಧಿಸಿದ್ದಾರೆ. ನಂತರ ಅವರುಗಳಿಗೆ ಶನಿವಾರಸಂತೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯಶವಂತ್, ಔಷಧಿ ವಿತರಕ ರಿತಿನ್ ಹಾಗೂ ರಶೀದ್ ಅಹ್ಮದ್ ಕಲ್‌ಮನಿ ವೈದ್ಯಕೀಯ ಪರೀಕ್ಷೆ ನಡೆಸಿ ಆರೋಪಿಗಳನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿ ಸಲಾಗಿದೆ.

ಗುಂಡೂರಾವ್ ಬಡಾವಣೆಯ ಎಂ.ಎA. ಶಾಹಿದ್, ಅಕ್ರಮ್, ಸುಂದ್ರಮ್ಮ, ಶನಿವಾರಸಂತೆಯ ಹರೀಶ್, ಹುಲುಸೆ ಗುರುರಾಜ್, ಬಿಳಾಹ ವಿವೇಕ್, ಕೆರೆಹಳ್ಳಿ ಮಹೇಂದ್ರ, ಶಿರಂಗಾಲ ಲೀಲಾಧರ್, ಬೆಳ್ಳಾರಳ್ಳಿ ವಿಜಯಕುಮಾರ್, ಅಂಕನಹಳ್ಳಿ ಆನಂದ್, ಬೆಟ್ಟದಳ್ಳಿ ಲಕ್ಷö್ಮಣಶೆಟ್ಟಿ, ಗಣಗೂರು ದಿನೇಶ್, ಚೌಡೇನಳ್ಳಿ ಶಿವಣ್ಣ, ಆಲೂರು ಸಿದ್ದಾಪುರ ಭರತ್‌ಕುಮಾರ್, ನಿಲುವಾಗಿಲು ಚಿದಾನಂದ, ಕೆಲಕೊಡ್ಲಿ ರಾಜೇಶ್, ಕೊಡ್ಲಿಪೇಟೆ ದಿಲೀಪ್‌ಕುಮಾರ್, ಕೊಣಿಗನಹಳ್ಳಿ ಸಂತೋಷ್, ಕಟ್ಟೆಪುರ ಶಿವ, ಹೊನ್ನೆಕೊಡಿ ಮೈತ್ರಿ, ಕೊಣಿಗನಹಳ್ಳಿ ನಾಗರತ್ನ, ಜನಾರ್ದನಹಳ್ಳಿ ಜಯಮ್ಮ, ಕೆರೆಕೇರಿ ಪುಟ್ಟಸ್ವಾಮಿ, ಕಿರಿಕೊಡ್ಲಿ ಪ್ರವೀಣಾಚಾರಿ ಅವರುಗಳನ್ನು ಬಂಧಿಸಲಾಯಿತು. ಈ ಪೈಕಿ ೧೯ ಮಂದಿಗೆ ಜಾಮೀನು ಸಿಕ್ಕಿದ್ದು, ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೊಳಪಡಿ ಸಲಾಗಿದೆ.

ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಎ.ಎಸ್.ಐ.ಗಳಾದ ಚನ್ನಯ್ಯಾ, ಶಿವಲಿಂಗ, ಶಶಿಧರ್, ಕೃಷ್ಣೇಗೌಡ, ಸಿಬ್ಬಂದಿಗಳಾದ ಶಶಿಕುಮಾರ್, ಡಿಂಪಲ್, ಬೋಪಣ್ಣ, ಪ್ರದೀಪ್ ಕುಮಾರ್, ಲೋಕೇಶ್, ಮುರಳಿ, ಅನಿಲ್, ಮಹಿಳಾ ಸಿಬ್ಬಂದಿಗಳಾದ ಶೋನಿ, ಪೂರ್ಣಿಮಾ, ಹೋಮ್ ಗಾರ್ಡ್ಗಳಾದ ಪಾಂಡು, ಸಿದ್ದಲಿಂಗ, ಲೋಕೇಶ ಮತ್ತು ಹರೀಶ ಭಾಗವಹಿಸಿದ್ದರು. -ನರೇಶ್ಚಂದ್ರ